ದೇಶ

ಬ್ಯಾಂಕ್ ಗೆ 5.44 ಲಕ್ಷ ಕೋಟಿ ಮೊತ್ತದ ಹಳೇ ನೋಟುಗಳ ಜಮಾ!

500, 1000 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವ ದಿನದಿಂದ ನ.18 ರವರೆಗೆ ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 5.44 ಲಕ್ಷ ಕೋಟಿ ರೂ ಮೊತ್ತದ ನಿಷೇಧಿತ ನೋಟುಗಳು ಜಮಾ ಆಗಿದೆ.

ಬ್ಯಾಂಕ್ ಗೆ 5.44 ಲಕ್ಷ ಕೋಟಿ ಮೊತ್ತದ ಹಳೇ ನೋಟುಗಳ ಜಮಾ!
ಹಳೇ ನೋಟು
Published On :
ಮುಂಬೈ: 500, 1000 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವ ದಿನದಿಂದ ನ.18 ರವರೆಗೆ ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 5.44  ಲಕ್ಷ ಕೋಟಿ ರೂ ಮೊತ್ತದ ನಿಷೇಧಿತ ನೋಟುಗಳು ಜಮಾ ಆಗಿದೆ.
ನ.10ರಿಂದ 18 ರ ವರೆಗೆ ಬ್ಯಾಂಕ್ ಗಳು ಕೌಂಟರ್ ಹಾಗೂ ಎಟಿಎಂ ಮೂಲಕ 1,03,316 ಕೋಟಿ ರೂಪಾಯಿಯಷ್ಟು (Rs 1.03 ಟ್ರಿಲಿಯನ್) ಹಣವನ್ನು ವಿತರಣೆ ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ. ರದ್ದುಗೊಂಡಿರುವ ನೋಟುಗಳನ್ನು ಪಡೆದು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡಲು ಹಾಗೂ ಹಳೆಯ ನೋಟುಗಳನ್ನು ಜಮಾ ಮಾಡಲು ಆರ್ ಬಿಐ ಕೌಂಟರ್ ಗಳಲ್ಲಿ, ವಾಣಿಜ್ಯ ಬ್ಯಾಂಕ್ ಗಳಲ್ಲಿ, ಪ್ರಾದೇಶಿಕ ಗ್ರಾಮೀಣ ಹಾಗೂ ನಗರ ಸಹಕಾರಿ ಬ್ಯಾಂಕ್ ಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನ.10 ರಿಂದ ಪ್ರಾರಂಭವಾಗಿ ನ.18 ರ ವರೆಗೆ ನಡೆದಿರುವ ಹಳೆಯ ನೋಟುಗಳ ಬದಲಾವಣೆ/ ಜಮಾವಣೆ ಪ್ರಕ್ರಿಯೆಯಲ್ಲಿ ಒಟ್ಟು 5,44,571( ವಿನಿಮಯ ಮಾಡಿಕೊಳ್ಳಲು ನೀಡಿದ ಹಳೆಯ ನೋಟುಗಳ ಮೊತ್ತ: 33,006 ಕೋಟಿ, ಖಾತೆಯಲ್ಲಿ ಜಮಾವಣೆಯಾದ ಹಳೆಯ ನೋಟುಗಳ ಮೊತ್ತ:  5,11,565 ಕೋಟಿ) ಲಕ್ಷ ಕೋಟಿ ಮೊತ್ತದ ಹಳೆಯ ನೋಟುಗಳು ಜಮಾವಣೆಯಾಗಿವೆ. ಓವರ್ ಡ್ರಾಫ್ಟ್ ಹಾಗೂ ಕ್ಯಾಷ್ ಕ್ರೆಡಿಟ್ ಖಾತೆಗಳಿಂದ ವಾರಕ್ಕೆ 50 ಸಾವಿರ ರೂ ಗಳನ್ನು ವಿತ್ ಡ್ರಾ ಮಾಡಬಹುದಾಗಿದೆ ಎಂದು ಆರ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  
ಈ ಅವಧಿಯಲ್ಲಿ ಬ್ಯಾಂಕ್ ಗಳ ಕೌಂಟರ್ ಅಥವಾ ಎಟಿಎಂ ಗಳಿಂದ ಜನರು ಒಟ್ಟು  1,03,316 ಕೋಟಿ ರೂಪಾಯಿಯಷ್ಟು ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರ್ ಬಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 500, 1000 ರೂ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಲು ಕೈಗೊಳ್ಳಲಾಗಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ನ.8 ರಂದು ಪ್ರಧಾನಿ ನರೇಂದ್ರ ಮೋದಿ ಘೋಶಿಸಿದ್ದರು. ನ.10 ರಿಂದ ಬ್ಯಾಂಕ್ ಗಳಲ್ಲಿ ನೋಟುಗಳ ವಿನಿಮಯ ಜಮಾವಣೆ ಪ್ರಕ್ರಿಯೆ ಪ್ರಾರಂಭವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.