ಇಂದಿರಾ ಗಾಂಧಿಯವರ ಜೀವನದಿಂದ ಪಾಠ ಕಲಿಯಬೇಕಿದೆ: ಪ್ರಣಬ್ ಮುಖರ್ಜಿ
ಇಂದಿರಾಗಾಂಧಿಯವರ ಜೀವನವೊಂದು ಪ್ರತೀಯೊಬ್ಬರಿಗೂ ಪಾಠವಾಗಿದ್ದು, ಅವರ ಜೀವನದಿಂದ ಪಾಠಕಲಿಯಬೇಕಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಹೇಳಿದ್ದಾರೆ...

ನವದೆಹಲಿ: ಇಂದಿರಾಗಾಂಧಿಯವರ ಜೀವನವೊಂದು ಪ್ರತೀಯೊಬ್ಬರಿಗೂ ಪಾಠವಾಗಿದ್ದು, ಅವರ ಜೀವನದಿಂದ ಪಾಠಕಲಿಯಬೇಕಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 100ನೇ ಜನ್ಮದಿನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಶತಮಾನೋತ್ಸವ ಉಪನ್ಯಾಸದಲ್ಲಿ ಮಾತನಾಡಿರುವ ಅವರು, ಇಂದಿರಾ ಗಾಂಧಿಯವರ ಜೀವನದಲ್ಲಿ ಪ್ರತೀಯೊಂದು ಸೋಲು ಕೂಡ ಯಶಸ್ಸಿನ ಮೈಲುಗಲ್ಲಾಗಿ ಮಾರ್ಪಟ್ಟಿತ್ತು. ಅವರ ಜೀವನ ಪ್ರತೀಯೊಬ್ಬರಿಗೂ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಸೋಲುವುದು ಅಥವಾ ಗೆಲುವು ಸಾಧಿಸುವುದು ಮುಖ್ಯವಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸಿ ನಮ್ಮ ಗುರಿಯನ್ನು ತಲುಪುದು ಮುಖ್ಯವಾಗಿರುತ್ತದೆ. ದೇಶದಲ್ಲಿರುವ ಜನರ ಕಲ್ಯಾಣಕ್ಕಾಗಿ ಎಲ್ಲರೂ ದುಡಿಯಬೇಕಿದೆ.
ಚುನಾವಣೆ ಸಂದರ್ಭದಲ್ಲಿ ಉಂಟಾಗಿದ್ದ ಹಗೆತನದ ವಾತಾವರಣಗಳು ಇಂದಿರಾಗಾಂಧಿಯವರಿಗೆ ಸಾಕಷ್ಟು ಕಷ್ಟಗಳನ್ನು ಎದುರು ಮಾಡಿತ್ತು. ಪ್ರತಿಪಕ್ಷಗಳು ಇಂದಿರಾ ಗಾಂಧಿಯವರ ವಿರುದ್ಧ ಸಾಕಷ್ಟು ಪ್ರಚಾರಗಳನ್ನು ಮಾಡುತ್ತಿದ್ದವು. ಮಾಧ್ಯಮಗಳೂ ಕೂಡ ಇಂದಿರಾ ಗಾಂಧಿಯವರ ವಿರುದ್ಧವಿತ್ತು. ಕೆಲವರು ಅವರಿಗೆ ಮರಣ ದಂಡನೆ ನೀಡುವಂತೆಯೂ ಘೋಷಣೆಗಳನ್ನು ಕೂಗುತ್ತಿದ್ದರು. ಈ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಇಂದಿರಾ ಗಾಂಧಿಯವರು ಯಶಸ್ಸಿನ ಮೈಲುಗಲ್ಲನ್ನು ಹತ್ತಿದ್ದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


