ದೇಶ

ಏಳನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಭತ್ಯೆಗಳನ್ನು ಅಂತಿಮಗೊಳಿಸಿದ ಸಮಿತಿ

7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಭತ್ಯೆಗಳ...

ಏಳನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಭತ್ಯೆಗಳನ್ನು ಅಂತಿಮಗೊಳಿಸಿದ ಸಮಿತಿ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಭತ್ಯೆಗಳ ಬಗ್ಗೆ ಪರಾಮರ್ಶೆ ನಡೆಸಲು ಸ್ಥಾಪಿಸಿರುವ ಸಮಿತಿ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಭತ್ಯೆಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಭತ್ಯೆಗಳ ಕುರಿತ ಸಮಿತಿಯ ಪ್ರಮುಖ ಸಭೆ ಇಂದು ನಡೆಯಿತು. ಇಂದಿನ ಸಭೆಯಲ್ಲಿ ಎಲ್ಲಾ ಭತ್ಯೆಗಳು ಅಥವಾ ಕೆಲವೊಂದನ್ನು ಅಂತಿಮಗೊಳಿಸಿರುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ಕಾರ್ಯದ ಪ್ರಧಾನ ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ ತಿಳಿಸಿದ್ದಾರೆ.ಸಭೆ ಮೊನ್ನೆ 16ರಂದು ನಡೆದಿತ್ತು.
ಹಣಕಾಸು ಕಾರ್ಯದರ್ಶಿ ಅಶೋಕ್ ಲವಸ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿದ್ದು ಅದು 7ನೇ ವೇತನ ಆಯೋಗದ ಪ್ರಸ್ತಾಪಗಳನ್ನು ಸಲ್ಲಿಸುವಂತೆ ತನ್ನ ಅಭಿಪ್ರಾಯಗಳನ್ನು ಸಲ್ಲಿಸಲು ತಿಳಿಸಿತ್ತು. ಸಮಿತಿ ತನ್ನ ಮೊದಲ ಸಭೆಯನ್ನು ಜುಲೈ 22ರಂದು ನಡೆಸಿತ್ತು ಮತ್ತು ಅದರ ಕೆಲಸವನ್ನು ಪೂರ್ಣಗೊಳಿಸಲು 4 ತಿಂಗಳ ಕಾಲಾವಕಾಶ ನಿಗದಿಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.