ದೇಶ

ಗಡಿಯಲ್ಲಿ 11 ಯೋಧರ ಹತ್ಯೆ: ಪಾಕ್ ಆರೋಪವನ್ನು ತಳ್ಳಿಹಾಕಿದ ಭಾರತೀಯ ಸೇನೆ

ಗಡಿಯಲ್ಲಿ 11 ಯೋಧರ ಹತ್ಯೆ: ಪಾಕ್ ಆರೋಪವನ್ನು ತಳ್ಳಿಹಾಕಿದ ಭಾರತೀಯ ಸೇನೆ
ಭಾರತೀಯ ಸೇನೆ
Published On :
ನವದೆಹಲಿ: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ 11 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತೀಯ ಸೇನೆ ತಳ್ಳಿಹಾಕಿದೆ.
ಭಾರತೀಯ ಸೇನೆ ಪಾಕಿಸ್ತಾನದ 7 ಸೈನಿಕರನ್ನು ಹತ್ಯೆ ಮಾಡಿದ್ದ ದಿನದಂದೇ ಪಾಕಿಸ್ತಾನ ಸೇನೆ 11 ಭಾರತೀಯ ಯೋಧರನ್ನು ಹತ್ಯೆ ಮಾಡಿತ್ತು ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಹೇಳಿದ್ದರು. ಇದಕ್ಕೆ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತತ ಸೇನಾಧಿಕಾರಿ ಪಾಕಿಸ್ತಾನ ಆರೋಪವನ್ನು ತಳ್ಳಿಹಾಕಿದ್ದು, ಗಡಿಯಲ್ಲಿ ಭಾರತದ ಯಾವುದೇ ಯೋಧರು ಮೃತಪಟ್ಟಿಲ್ಲ ಎಂದು ಟ್ವೀಟಿಸಿದ್ದಾರೆ. 
ಗಡಿಯಲ್ಲಿ ನಮ್ಮ ದೇಶದ 7 ಮಂದಿ ಸೈನಿಕರು ಹುತಾತ್ಮರಾದಾಗ ನಾವು  ಕನಿಷ್ಠ 11 ಮಂದಿ ಭಾರತೀಯ ಸೈನಿಕರನ್ನ ಕೊಂದಿದ್ದೇವೆ. ಪಾಕಿಸ್ತಾನ ಇತ್ತೀಚೆಗೆ ಸುಮಾರು 44 ಭಾರತೀಯ ಸೈನಿಕರನ್ನು ಕೊಂದು ಹಾಕಿದೆ . ಆದರೇ ಭಾರತ ಮಾತ್ರ ಇದನ್ನು ಒಪ್ಪಿಕೊಳ್ಳದೇ ಸುಮ್ಮನೆ ಧೈರ್ಯ ಪ್ರದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ತನಗಾದ ನಷ್ಟವನ್ನ ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ತಾನ ಸೇನೆ ವೃತ್ತಿಪರವಾದ ಸೇನಾಪಡೆ ಹೊಂದಿದೆ ಎಂದು ಈ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಶರೀಫ್ ಹೇಳಿದ್ದಾರೆ. ಆಕ್ರಮಣಕಾರಿ ಕ್ರಮಗಳಿಗೆ ಪ್ರತಿಯಾದ ಫಲಿತಾಂಶ ಇರುತ್ತದೆ ಎಂದು ಅವರು ನರೇಂದ್ರ ಮೋದಿಗೆ ಸಂದೇಶ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.