ದೇಶ

ಕುಡಿದ ಅಮಲಿನಲ್ಲಿ ಮದುವೆ ಸಮಾರಂಭದಲ್ಲಿ ಗಾಡ್ ವುಮನ್ ನಿಂದ ಶೂಟಿಂಗ್: ಒಂದು ಸಾವು

ಮದುವೆ ಸಮಾರಂಭದಲ್ಲಿ ಕುಡಿದ ಅಮಲಿನಲ್ಲಿ ಗಾಡ್ ವುಮೆನ್ ಮತ್ತು ಆಕೆಯ ಖಾಸಗಿ ಸೆಕ್ಯೂರಿಟಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ಮೂವರು...,

ಕುಡಿದ ಅಮಲಿನಲ್ಲಿ ಮದುವೆ ಸಮಾರಂಭದಲ್ಲಿ ಗಾಡ್ ವುಮನ್ ನಿಂದ ಶೂಟಿಂಗ್: ಒಂದು ಸಾವು
ಸಾಂದರ್ಭಿಕ ಚಿತ್ರ
Published On :

ಛಂಡಿಗಡ: ಮದುವೆ ಸಮಾರಂಭದಲ್ಲಿ ಕುಡಿದ ಅಮಲಿನಲ್ಲಿ ಗಾಡ್ ವುಮೆನ್ ಮತ್ತು ಆಕೆಯ ಖಾಸಗಿ ಸೆಕ್ಯೂರಿಟಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಕರ್ನಾಲ್ ಎಂಬಲ್ಲಿ ನಡೆದಿದೆ.

ಛಂಡಿಗಡದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಕರ್ನಾಲ್ ನಲ್ಲಿರುವ ಸಾವಿತ್ರಿ ಲಾನ್ಸ್ ಮ್ಯಾರೇಜ್ ಪ್ಯಾಲೇಸ್ ನಲ್ಲಿ ಈ ದುರಂತ ನಡೆದಿದೆ.

ಮೃತ ಮಹಿಳೆ ಮತ್ತು ಗಾಯಗೊಂಡಿರುವ ಇಕರರು ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದರು, ಈ ವೇಳೆ ಸಾದ್ವಿ ದೇವ ಠಾಕೂರ್ ಮತ್ತು ಆಕೆಯ ಸಹಚರರು ಕುಡಿದ ಅಮಲಿನಲ್ಲಿ ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳಿಂದ ಹಲವು ಸುತ್ತು ಫೈರ್ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಗಾಡ್ ವುಮನ್ ಮತ್ತು ಆಕೆಯ ಸಹಚರರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.