ದೇಶ

ಮೋದಿ ನಾಯಕತ್ವದ ಭಾರತವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ: ಪಾಕ್ ಗೆ ರಾಜನಾಥ್ ಸಿಂಗ್

ಭಾರತದ ವಿರುದ್ಧ ಭಯೋತ್ಪಾದಕರ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿರುವ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದು, ನರೇಂದ್ರ ಮೋದಿ ನಾಯಕತ್ವದ ಭಾರತವನ್ನು ದುರ್ಬಲಗೊಳಿಸಲು...

ಮೋದಿ ನಾಯಕತ್ವದ ಭಾರತವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ: ಪಾಕ್ ಗೆ ರಾಜನಾಥ್ ಸಿಂಗ್
Published On :
ರಾಯ್ ಪುರ: ಭಾರತದ ವಿರುದ್ಧ ಭಯೋತ್ಪಾದಕರ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿರುವ ಪಾಕಿಸ್ತಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದು, ನರೇಂದ್ರ ಮೋದಿ ನಾಯಕತ್ವದ ಭಾರತವನ್ನು ದುರ್ಬಲಗೊಳಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಛತ್ತಿಸ್ ಗಢದ 16ನೇ ರಾಜ್ಯೋಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಪಾಕಿಸ್ತಾನ ಭಯೋತ್ಪಾದನೆಯ ಹೇಡಿ ಕೃತ್ಯದ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ.  ಆದರೆ ನಮ್ಮ ಸರ್ಕಾರ ಭಾರತ ಯಾರ ಎದುರೂ ತಲೆ ತಗ್ಗಿಸಲು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ನೆರೆಯ ರಾಷ್ಟ್ರವೊಂದು ನಮ್ಮ ರಾಷ್ಟ್ರಕ್ಕೆ ಹಾನಿ ಉಂಟುಮಾಡಬೇಕೆಂದು ನಿರಂತರವಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ, ಆದರೆ ಭಯೋತ್ಪಾದನೆ ಧೀರರ ಅಸ್ತ್ರವಲ್ಲ, ಬದಲಾಗಿ ಹೇಡಿಗಳ ಅಸ್ತ್ರ ಎಂಬುದನ್ನು ಅರಿಯಲು ವಿಫಲವಾಗುತ್ತಿದೆ ಎಂದು ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
"ಯಾವ ಮಟ್ಟದ ಹೇಡಿತನದಿಂದ ಅವರು ನಮ್ಮ ಯೋಧರ ಮೇಲೆ ದಾಳಿ ನಡೆಸಿದರು ಎಂದು ನಿಮಗೆ ಗೊತ್ತಿದೆ, ಆದರೆ ಆ ಘಟನೆ ನಡೆದ ಬಳಿಕ ನಮ್ಮ ಯೋಧರು ಅದ್ಭುತ ಕೆಲಸ ಮಾಡಿದರು. ಯಾರ ಎದುರೂ ಭಾರತ ತಲೆತಗ್ಗಿಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ, ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.