ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಉದ್ಯಮಿ ವಿಜಯ್ ಮಲ್ಯ ಅವರು ವಿದೇಶಿ ವಿನಿಮಯ ನಿಯಂತ್ರ ಕಾಯ್ದೆ (ಫೆರಾ) ಉಲ್ಲಂಘನೆ ಸಂಬಂಧಿಸಿದ ಪ್ರಕರಣದಲ್ಲಿ ಪದೇ ಪದೇ ಸಮನ್ಸ್ ಗಳಿಂದ ತಪ್ಪಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು...

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಅವರು ವಿದೇಶಿ ವಿನಿಮಯ ನಿಯಂತ್ರ ಕಾಯ್ದೆ (ಫೆರಾ) ಉಲ್ಲಂಘನೆ ಸಂಬಂಧಿಸಿದ ಪ್ರಕರಣದಲ್ಲಿ ಪದೇ ಪದೇ ಸಮನ್ಸ್ ಗಳಿಂದ ತಪ್ಪಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ವೊಂದನ್ನು ಶುಕ್ರವಾರ ಜಾರಿ ಮಾಡಿದೆ.
ವಿಜಯ್ ಮಲ್ಯ ಅವರ ವಿರುದ್ಧ ಸಾಕಷ್ಟು ವಂಚನೆ ಪ್ರಕರಣಗಳಿದ್ದು, ಪ್ರಕರಣ ಸಂಬಂಧ ಮಲ್ಯ ಅವರಿಗೆ ಸಾಕಷ್ಟು ಬಾರಿ ಸಮನ್ಸ್ ನ್ನು ಜಾರಿ ಮಾಡಲಾಗಿದೆ. ಆದರೂ, ಸಮನ್ಸ್ ಗಳಿಂದ ಮಲ್ಯ ಅವರು ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ.
ಭಾರತಕ್ಕೆ ಮರಳಿ ಬರುವ ಉದ್ದೇಶ ಮಲ್ಯ ಅವರಿಗೆ ಇಲ್ಲ. ಹೀಗಾಗಿ, ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ನ್ನು ಜಾರಿ ಮಾಡುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.
2012ರಲ್ಲೂ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ವೊಂದು ಜಾರಿಯಾಗಿತ್ತು. ವಿದೇಶದಲ್ಲಿರುವ ಆಸ್ತಿ ಕುರಿತ ಎಲ್ಲಾ ವಿವರಗಳನ್ನು ನೀಡುವಂತೆ ಮಲ್ಯ ಅವರಿಗೆ ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


