ದೇಶ

9 ವರ್ಷದ ಅವಳಿ ಸಹೋದರಿಯ ಮೇಲೆ ಅಪ್ಪ ಹಾಗೂ ಅಪ್ರಾಪ್ತ ಮಗನಿಂದ ಅತ್ಯಾಚಾರ

9 ವರ್ಷದ ಅಪ್ರಾಪ್ತ ಅವಳಿ ಸಹೋದರಿಯರ ಮೇಲೆ ತಂದೆ ಹಾಗೂ ಆತನ ಅಪ್ರಾಪ್ತ ಮಗ ನಿರಂತರ ಒಂದು ವರ್ಷದಿಂದ ಅತ್ಯಾಚಾರ ನಡೆಸುತ್ತಿರುವ...

9 ವರ್ಷದ ಅವಳಿ ಸಹೋದರಿಯ ಮೇಲೆ ಅಪ್ಪ ಹಾಗೂ ಅಪ್ರಾಪ್ತ ಮಗನಿಂದ ಅತ್ಯಾಚಾರ
ಸಾಂದರ್ಭಿಕ ಚಿತ್ರ
Published On :

ಹೈದರಾಬಾದ್: 9 ವರ್ಷದ ಅಪ್ರಾಪ್ತ ಅವಳಿ ಸಹೋದರಿಯರ ಮೇಲೆ ತಂದೆ ಹಾಗೂ ಆತನ ಅಪ್ರಾಪ್ತ ಮಗ ನಿರಂತರ ಒಂದು ವರ್ಷದಿಂದ ಅತ್ಯಾಚಾರ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೈದರಾಬಾದ್ ನ ಮೈಲಾರದೇವಪಳ್ಳಿ ಎಂಬ ಪ್ರದೇಶದಲ್ಲಿ ಜಾಫರ್ ಮತ್ತು ಆತನ 16 ವರ್ಷದ ಮಗ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ.ಇದಕ್ಕೆ ಸಂತ್ರಸ್ತೆಯರ ಕುಟುಂಬಸ್ಥರು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ಸಹೋದರಿಯರು ಎನ್ ಜಿ ಓ ಬಳಿ ಹೇಳಿಕೊಂಡಿದ್ದಾರೆ. ಅನಂತರ ಸ್ವಯಂ ಸೇವಾ ಸಂಘದ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತರ ಹೇಳಿಕೆ ಪ್ರಕಾರ ದೂರು ದಾಖಲಿಸಿಕೊಂಡಿದ್ದೇವೆ, ಆದರೆ ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ಹೇಳಿರುವ ಪೊಲೀಸರು ಸಂತ್ರಸ್ತೆಯರು ನೇಪಾಳ ಮೂಲದವರಾಗಿದ್ದು, ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.