ದೇಶ

ತುಂಡುಡುಗೆ ಮೇಲೆ ಪ್ರಧಾನಿ ಮೋದಿ ಚಿತ್ರ: ನಟಿ ರಾಖಿ ಸಾವಂತ್ ವಿರುದ್ಧ ಎಫ್ಐಆರ್ ದಾಖಲು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಬಟ್ಟೆಯನ್ನು ತೊಟ್ಟ ಕಾರಣಕ್ಕೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರ ವಿರುದ್ಧ ಶುಕ್ರವಾರ ಎಫ್ಐಆರ್...

ತುಂಡುಡುಗೆ ಮೇಲೆ ಪ್ರಧಾನಿ ಮೋದಿ ಚಿತ್ರ: ನಟಿ ರಾಖಿ ಸಾವಂತ್ ವಿರುದ್ಧ ಎಫ್ಐಆರ್ ದಾಖಲು
ರಾಖಿ ಸಾವಂತ್ ತುಂಡುಡುಗೆ ಮೇಲೆ ಪ್ರಧಾನಿ ಮೋದಿ ಚಿತ್ರ
Published On :

ಜೈಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಬಟ್ಟೆಯನ್ನು ತೊಟ್ಟ ಕಾರಣಕ್ಕೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ನಟಿ ರಾಖಿ ಸಾವಂತ್ ಅವರು ಅಮೆರಿಕಾ ಪ್ರವಾಸಕ್ಕೆ ತೆರಳಿದ್ದರು. ಅಮೆರಿದಲ್ಲಿರುವ ನೆಲೆಯೂರಿರುವ ಭಾರತೀಯರು ಸ್ವಾತಂತ್ರ್ಯದಿನದ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಖಿ ಸಾವಂತ್ ಅವರು ಕಪ್ಪು ಬಣ್ಣದ ತುಂಡುಡುಗೆಯನ್ನು ಧರಿಸಿದ್ದರು.

ಈ ಬಟ್ಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಕೆ ಮಾಡಲಾಗಿತ್ತು. ಮೋದಿಯವರ ಭಾವಚಿತ್ರವನ್ನು ಬಳಸಿಕೊಂಡು ವಿನ್ಯಾಸ ಮಾಡಲಾಗಿದ್ದ ಈ ಬಟ್ಟೆಯನ್ನು ರಾಖಿ ಸಾವಂತ್ ಅವರು ತೊಟ್ಟಿದ್ದರು. ಇದರ ಫೋಟೋವನ್ನು ರಾಖಿ ಸಾವಂತ್ ಅವರು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಈಗಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಫೋಟೋ ವಿರೋಧ ವ್ಯಕ್ತಪಡಿಸಿದ್ದ ವಕೀಲ ಪ್ರಜೀತ್ ತಿವಾರಿ ಎಂಬುವವರು ನಿನ್ನೆಯಷ್ಟೇ ಕಂಕ್ರೊಲಿ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದರು. ದೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಉಡುಪವನ್ನು ರಾಖಿ ಸಾವಂತ್ ಅವರು ಧರಿಸಿದ್ದು, ತುಂಡುಡುಗೆಯ ಮೇಲೆ ಮೋದಿಯವರ ಭಾವಚಿತ್ರಗಳಿವೆ. ಈ ಬಟ್ಟೆಯನ್ನು ರಾಖಿ ಸಾವಂತ್ ಅವರು ಧರಿಸಿದ್ದು, ಮೋದಿಯವರಿಗೆ ಅವಮಾನ ಮಾಡಿದ್ದಾರೆಂದು ಹೇಳಿದ್ದರು.

ರಾಖಿ ಸಾವಂತ್ ಅವರ ವಿರುದ್ಧ ಮುಂಬೈ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿದ್ದು, ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.