2002ರ ಗುಜರಾತ್ ಗಲಭೆ: ಹೈಕೋರ್ಟ್ ನಿಂದ ಇಂದು ತೀರ್ಪು ಪ್ರಕಟ
14 ವರ್ಷಗಳ ಹಿಂದೆ ಗೋಧ್ರಾ ನರಮೇಧದ ನಂತರ ಸಂಭವಿಸಿದ ಧಾರ್ಮಿಕ ಗಲಭೆಗೆ ಸಂಬಂಧಪಟ್ಟಂತೆ ಅಹಮದಾಬಾದ್ ...

ಅಹ್ಮದಾಬಾದ್: 14 ವರ್ಷಗಳ ಹಿಂದೆ ಗೋಧ್ರಾ ನರಮೇಧದ ನಂತರ ಸಂಭವಿಸಿದ ಧಾರ್ಮಿಕ ಗಲಭೆಗೆ ಸಂಬಂಧಪಟ್ಟಂತೆ ಅಹಮದಾಬಾದ್ ಹೈಕೋರ್ಟ್ ಗುರುವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ.
ಆರೋಪಿಗಳ ವಿರುದ್ಧ ಕೊಲೆ, ಕ್ರಿಮಿನಲ್ ಸಂಚು ಮತ್ತು ಬೆಂಕಿ ಹಚ್ಚಿದ ಪ್ರಕರಣ ದಾಖಲಿಸಲಾಗಿದ್ದು, ಅಹಮದಾಬಾದ್ ನ ನಿವಾಸಿ ಕಾಂಪ್ಲೆಕ್ಸ್ ವೊಂದರಲ್ಲಿ ಆಶ್ರಯ ಪಡೆದಿದ್ದ 69 ಮಂದಿ ಮುಸಲ್ಮಾನರನ್ನು ಸುಟ್ಟುಹಾಕಲಾಗಿತ್ತು. ಪ್ರಕರಣ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರು ಕೇಳಿಬರುತ್ತಿದೆ. ಅವರು ಆ ಸಮಯದಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದರು. ಧಾರ್ಮಿಕ ಕದನ ನಡೆದು 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೂ ಮುಖ್ಯಮಂತ್ರಿ ಕಂಡೂ ಕಾಣದವರಂತೆ ವರ್ತಿಸಿದ್ದರು ಎಂದು ಆರೋಪ ಕೇಳಿಬರುತ್ತಿದೆ.
ಪ್ರಕರಣದ ಮೂಲ ಆರೋಪಿಗಳು ಸಾವನ್ನಪ್ಪಿದ್ದರಿಂದ ತೀರ್ಪು ಪ್ರಕಟಕ್ಕೆ ಇಷ್ಟು ವರ್ಷ ಹಿಡಿದಿದ್ದು, ನಾಳೆ ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆಯಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆರ್ ಸಿ ಕೊಡೆಕರ್ ತಿಳಿಸಿದ್ದಾರೆ.
ಅಹಮದಾಬಾದಿನ ಗುಲ್ಬರ್ಗ ಸೊಸೈಟಿ ಕಾಂಪ್ಲೆಕ್ಸ್ ನಲ್ಲಿ ಅಡಗಿಕುಳಿತಿದ್ದ ಮುಸಲ್ಮಾನರನ್ನು ಸುಟ್ಟು ಕೊಂದು ಹಾಕಿದ ಎಲ್ಲಾ 62 ಮಂದಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವುದನ್ನು ಬಯಸುತ್ತೇನೆ ಎಂದು ಕೊಡೇಕರ್ ತಿಳಿಸಿದ್ದಾರೆ.
2002, ಫೆಬ್ರವರಿ 27ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯಾತ್ರಿಕರ ಮೇಲೆ ಬೆಂಕಿ ಹಚ್ಚಿದ್ದರಿಂದ 59 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಹಿಂದೂಗಳು ಮುಸಲ್ಮಾನರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.ಗುಜರಾತ್ ನಲ್ಲಿ ಧಾರ್ಮಿಕ ಗಲಭೆ ಉಂಟಾಗಿತ್ತು. ಪ್ರಕರಣದ ವಿಚಾರಣೆಯನ್ನು 2012ರಲ್ಲಿ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್ ನ ತನಿಖಾ ವಿಭಾಗ ನರೇಂದ್ರ ಮೋದಿಯವರ ವಿರುದ್ಧ ಅಪರಾಧ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು.
ಗಲಭೆಗೆ ಸಂಬಂಧಪಟ್ಟಂತೆ 100ಕ್ಕೂ ಅಧಿಕ ಮಂದಿ ಅಪರಾಧಿಗಳೆಂದು ತೀರ್ಪು ನೀಡಲಾಗಿತ್ತು. ಆದರೆ ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಸೇರಿದಂತೆ ಗಲಭೆಯ ಸಂಪೂರ್ಣ ತನಿಖೆ ಮತ್ತೊಮ್ಮೆ ನಡೆಸುವಂತೆ 2009ರಲ್ಲಿ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶ ನೀಡಿತ್ತು. ಅದರಂತೆ ತನಿಖೆ ಆರಂಭಗೊಂಡಿತು. ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಹಚರರ ಪಾತ್ರ ಗಲಭೆಯಲ್ಲಿದ್ದಿರಬಹುದೇ ಎಂದು ತನಿಖೆ ನಡೆಸಿ ಎಂಬುದಾಗಿ ಅರ್ಜಿ ಸಲ್ಲಿಸಿದ್ದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ತಡೆಹಿಡಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


