ದೇಶ

ರಾಜನ್ ಮರುನೇಮಕ ವಿಚಾರ ಮಾಧ್ಯಮಗಳಿಗೆ ಸಂಬಂಧಿಸಿದ್ದಲ್ಲ: ಮೋದಿ

ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರನ್ನು ಮರು ನೇಮಕ ಮಾಡುವ ವಿಚಾರ ಆಡಳಿತಾತ್ಮಕ ವಿಷಯವಾಗಿದ್ದು...

ರಾಜನ್ ಮರುನೇಮಕ ವಿಚಾರ ಮಾಧ್ಯಮಗಳಿಗೆ ಸಂಬಂಧಿಸಿದ್ದಲ್ಲ: ಮೋದಿ
ರಘುರಾಮ್ ರಾಜನ್
Published On :

ವಾಷಿಂಗ್ಟನ್: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರನ್ನು ಮರು ನೇಮಕ ಮಾಡುವ ವಿಚಾರ ಆಡಳಿತಾತ್ಮಕ ವಿಷಯವಾಗಿದ್ದು, ಮಾಧ್ಯಮಗಳಿಗೆ ಸಂಬಂಧಿಸಿದ್ದಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. 
 
''ರಘುರಾಮ್ ರಾಜನ್ ಅವರನ್ನು ಮರು ನೇಮಕ ಮಾಡುವ ಸರ್ಕಾರದ ಆಡಳಿತಾತ್ಮಕ ವಿಚಾರ ಮಾಧ್ಯಮಗಳಿಗೆ ಬೇಕಾಗಿವೆ ಎಂದು ನನಗನಿಸುವುದಿಲ್ಲ. ಅಲ್ಲದೆ ಈ ವಿಷಯ ಸೆಪ್ಟೆಂಬರ್ ತಿಂಗಳಲ್ಲಷ್ಟೇ ನಿರ್ಣಯವಾಗಲಿದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಘುರಾಮ್ ರಾಜನ್ ಅವರನ್ನು ಮರು ನೇಮಕ ಮಾಡುವುದನ್ನು ನೀವು ಬೆಂಬಲಿಸುತ್ತೀರಾ ಎಂದು ಕೇಳಿದ್ದಕ್ಕೆ ಮೋದಿಯವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಭಾರತದ ಅರ್ಥವ್ಯವಸ್ಥೆ, ಅಸಹಿಷ್ಣುತೆ ಹಾಗೂ ಕೆಲವು ವಿಷಯಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ರಘುರಾಮ್ ರಾಜನ್ ಭಾರತವನ್ನು ಒಕ್ಕಣ್ಣಿನ ರಾಜ ಎಂದು ಹೇಳಿ ಹಲವರಿಂದ ಟೀಕೆಗೆ ಒಳಗಾಗಿದ್ದರು.

ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ರಾಜನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾರತಕ್ಕೆ ಸಂಬಂಧಪಟ್ಟ ರಹಸ್ಯ, ಸೂಕ್ಷ್ಮ ಮಾಹಿತಿಗಳನ್ನು ಬೇರೆ ದೇಶಗಳಿಗೆ ರವಾನಿಸುತ್ತಾರೆ, ಅಮೆರಿಕದ ಗ್ರೀನ್ ಕಾರ್ಡು ಹೊಂದಿದ್ದಾರೆ, ಹಾಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪ್ರಧಾನಿಗೆ ಪತ್ರ ಕೂಡ ಬರೆದಿದ್ದರು.

ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಆರ್ ಬಿಐ ಗವರ್ನರ್ ಅರುಣ್ ಜೇಟ್ಲಿ, ಯಾರ ವಿರುದ್ಧವೂ ವೈಯಕ್ತಿಕ ಟೀಕೆಗಳನ್ನು ನಾವು ಇಷ್ಟಪಡುವುದಿಲ್ಲ. ಸರ್ಕಾರ ಮತ್ತು ಆರ್ ಬಿಐ ಸಂಬಂಧ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.