ದೇಶ

ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್: ಕಿಡಿಗೇಡಿಗಳಿಗೆ ಸಾಥ್ ನೀಡಿದ್ದು ಆಕೆಯ ದೊಡ್ಡಪ್ಪ-ದೊಡ್ಡಮ್ಮ

14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ...

ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್: ಕಿಡಿಗೇಡಿಗಳಿಗೆ ಸಾಥ್ ನೀಡಿದ್ದು ಆಕೆಯ ದೊಡ್ಡಪ್ಪ-ದೊಡ್ಡಮ್ಮ
ಸಾಂದರ್ಭಿಕ ಚಿತ್ರ
Published On :
ಎಲ್ಲೂರು: 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ಗೋಧಾವರಿ ಜಿಲ್ಲೆಯ ಪೆದಪಡು ಮಂಡಲ್ ನಲ್ಲಿರುವ ಖಾಜಿಗುಡೆಂನಲ್ಲಿ ಮೇ 20ರಂದು ಆರು ಆರೋಪಿಗಳು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ವಿಪರ್ಯಾಸವೆಂದರೆ, ಸಾಮೂಹಿಕ ಅತ್ಯಾಚಾರವೆಸುಗುವ ವೇಳೆ ಸಂತ್ರಸ್ತೆಯ ದೊಡ್ಡಪ್ಪ ದೊಡ್ಡಮ್ಮ ಬಾಗಿಲ ಬಳಿ ಕಾವಲು ಕಾದು ಕಿಡಿಗೇಡಿಗಳಿಗೆ ಸಹಾಯ ಮಾಡಿದ್ದಾರೆ. 
ಮಂಡೇ ರವಿ(30) ಮತ್ತು ಆತನ ಐವರು ಸ್ನೇಹಿತರು ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು. ಎಲ್ಲರೂ ಅದೇ ಊರಿನವರಾಗಿದ್ದಾರೆ. ಸಂತ್ರಸ್ತೆಯ ಪೋಷಕರು ದಿನಗೂಲಿ ನೌಕರರು. 
ಪ್ರತಿನಿತ್ಯದಂತೆ ತಂದೆ ತಾಯಿ ಇಬ್ಬರು ಕೂಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಇದನ್ನು ಗಮನಿಸಿದ ರವಿ ಎಂಬುವವನು ತನ್ನ ಸ್ನೇಹಿತ ಜೊತೆಗೂಡಿ ಮನೆಗೆ ನುಗ್ಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ವಿಪರ್ಯಾಸವೆಂದರೆ ಆರೋಪಿಗಳಿಗೆ ಸಂತ್ರಸ್ತೆಯ ದೊಡ್ಡಪ್ಪ- ದೊಡ್ಡಮ್ಮ ಅಂದರೆ ತಂದೆಯ ಅಣ್ಣ ಮತ್ತು ಆತನ ಪತ್ನಿ ಸಹಾಯ ಮಾಡಿದ್ದು, ಬಾಗಿಲ ಬಳಿ ಯಾರು ಬರದಂತೆ ನೋಡಿಕೊಂಡು ಕಾವಲು ಕಾದಿದ್ದಾರೆ. 
ಅತ್ಯಾಚಾರವಸೆಗಿದ ನಂತರ ಬಾಲಕಿಗೆ ಈ ಘಟನೆಯನ್ನು ಯಾರ ಬಳಿ ಹೇಳದಂತೆ ಬೆದರಿಕೆ ಹಾಕಿದ್ದು, ಬಾಯ್ಬಿಟ್ಟರೇ, ತಂದೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. 
ಕೆಲವು ದಿನಗಳ ನಂತರ ಬಾಲಕಿ ಹೊಟ್ಟೆನೋವು ಎಂದು ಹೇಳಿದಾಗ ಅನುಮಾನಗೊಂಡ ಪೋಷಕರು ವಿಚಾರಸಿದ್ದಾರೆ. ಈ ವೇಳೆ ಬಾಲಕಿ ಬಾಯ್ಬಿಟ್ಟಿದ್ದಾಳೆ. ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ಸಂತ್ರಸ್ತೆಯ ತಂದೆ ಮೇಲೆ ಇದ್ದ ಹಳೇ ದ್ವೇಷದ ಹಿನ್ನಲೆಯಲ್ಲಿ ದೊಡ್ಡಪ್ಪ ಮತ್ತು ದೊಡ್ಡಮ್ಮ ಈ ಕೃತ್ಯವೆಸಗಲು ಆರೋಪಿಗಳಿಗೆ ಸಹಾಯ ಮಾಡಿದ್ದಾರೆ. ತಮ್ಮನ ಮೇಲಿನ ಕೋಪವನ್ನು ಆತನ ಮಗಳ ಮೇಲೆ ತೀರಿಸಿಕೊಂಡತಾಗಿದೆ. 
ಪ್ರಾಥಮಿಕ ತನಿಖಾ ಹಂತದಲ್ಲಿ ಈ ಪ್ರಕರಣದಲ್ಲಿ ದೊಡ್ಡಪ್ಪ-ದೊಡ್ಡಮ್ಮ ಪ್ರಮುಖ ಆರೋಪಿಗಳು ಎಂದು ಪರಿಗಣಿಸಲಾಗಿದೆ. ಇನ್ನು ಅತ್ಯಾಚಾರವೆಸಗಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆದಿದೆ. ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.