ದೇಶ

ಇಟಲಿ ನಾವಿಕನಿಗೆ ಜಾಮೀನು ಸಡಿಲ: ಕೇಂದ್ರದ ವಿರುದ್ಧ ಕೇರಳ ಸಿಎಂ ಕಿಡಿ

ಸುಪ್ರೀಂಕೋರ್ಟ್ ಇಟಲಿಯ ಓರ್ವ ನಾವಿಕನಿಗೆ ಜಾಮೀನು ಷರತ್ತನ್ನು ಸಡಿಲಗೊಳಿಸಿದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಕೇರಳ ಸರ್ಕಾರ...

ಇಟಲಿ ನಾವಿಕನಿಗೆ ಜಾಮೀನು ಸಡಿಲ: ಕೇಂದ್ರದ ವಿರುದ್ಧ ಕೇರಳ ಸಿಎಂ ಕಿಡಿ
ಪಿಣರಾಯಿ ವಿಜಯನ್‌
Published On :
ತಿರುವನಂತಪುರಂ: ಸುಪ್ರೀಂಕೋರ್ಟ್ ಇಟಲಿಯ ಓರ್ವ ನಾವಿಕನಿಗೆ ಜಾಮೀನು ಷರತ್ತನ್ನು ಸಡಿಲಗೊಳಿಸಿದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಕೇರಳ ಸರ್ಕಾರ ಕಿಡಿ ಕಾರಿದೆ.  
2012ರ ಕೇರಳದ ಮೀನುಗಾರರಿಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ನಾವಿಕರಿಬ್ಬರ ಪೈಕಿ ಓರ್ವ ನಾವಿಕನಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು,  ‘ಮಾನವೀಯ ನೆಲೆಯಲ್ಲಿ ಜಾಮೀನು ಷರತ್ತನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್ ಆತನಿಗೆ ತನ್ನ ತವರಿಗೆ ಹೊರಡಲು ಗುರುವಾರ ಅನುಮತಿ ನೀಡಿದೆ. ಇದಕ್ಕೆ ಕೇರಳ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಾತನಾಡಿ, ಪ್ರಕರಣ ಕುರಿತು ಪ್ರಾರಂಭದಿಂದಲೂ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ನಾವಿಕನಿಗೆ ಜಾಮೀನು ಷರತ್ತನ್ನು ಸಡಿಲಗೊಳಿಸಲು ತನ್ನ ಆಕ್ಷೇಪವಿಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದು ಖಂಡನೀಯ. ಕೇಂದ್ರ ಸರ್ಕಾರ ಈ ರೀತಿ ಹೇಳಿಕೆ ನೀಡಬಾರದಿತ್ತು. ಈ ರೀತಿ ಹೇಳಿಕೆ ನೀಡುವುದರ ಮೂಲಕ ಕೇಂದ್ರ ಸರ್ಕಾರ ತಪ್ಪು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
2012ರಲ್ಲಿ ಇಟಲಿಯ ತೈಲ ಟ್ಯಾಂಕರ್ ಕಾವಲು ನಿರತರಾಗಿದ್ದ ನಾವಿಕರಾದ ಸಾಲ್ವಟೋರ್ ಗಿರೋನ್ ಮತ್ತು ಮಸ್ಸಿಮಿಲಿಯಾನೊ ಲಾಟೊರ್ರೆ ತಮ್ಮ ನೌಕೆಯ ಸಮೀಪ ಬಂದ ಕೇರಳದ  ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ತಿಳಿದು ಗುಂಡಿಕ್ಕಿ ಹತ್ಯೆಗೈದಿದ್ದರು. ಬಳಿಕ ಇಬ್ಬರೂ ನಾವಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತೀವ್ರ ಹಗ್ಗ-ಜಗ್ಗಾಟದಿಂದ ಕೂಡಿದ್ದ ಈ  ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಇಟಲಿ ಆಗ್ರಹಿಸಿತ್ತು. ಆದರೆ ಪ್ರಕರಣ ತನ್ನ ದೇಶದಲ್ಲಿ ನಡೆದಿದ್ದು, ಅದೂ ಕೂಡ ತನ್ನ ನಾಗರೀಕರ  ಹತ್ಯೆಯಾಗಿರುವುರಿಂದ ಭಾರತದಲ್ಲೇ ವಿಚಾರಣೆ ನಡೆಸಬೇಕು ಎಂದು ಭಾರತ ವಾದಿಸಿತ್ತು. ಹೀಗಾಗಿ ಪ್ರಕರಣದಲ್ಲಿ ಸುಪ್ರೀಂ ಮಧ್ಯ ಪ್ರವೇಶ ಮಾಡಿತ್ತು. ಈ ಹಿಂದೆ ಪ್ರಕರಣದ ಇನ್ನೊಬ್ಬ ನಾವಿಕ  ಮಸ್ಸಿಮಿಲಿಯಾನೊ ಲಾಟೊರ್ರೆ 2014ರಲ್ಲೇ ಇಟಲಿಗೆ ವಾಪಸಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.