ಸಂಜೌತಾ ಎಕ್ಸ್‌ಪ್ರೆಸ್ ಸ್ಪೋಟ: ಅಮೆರಿಕ ಗುಪ್ತಚರ ವರದಿ ಸಲ್ಲಿಸಲಿರುವ ಎನ್ ಐಎ
2007ರ ಭಾರತದ ಸಂಜೌತಾ ಎಕ್ಸ್‌ಪ್ರೆಸ್ ರೈಲು ಸ್ಪೋಟ ಪ್ರಕರಣದಲ್ಲಿ ಲಷ್ಕರ್-ಇ- ತೊಯಿಬಾ ಸಂಘಟನೆಯ ಕೈವಾಡವಿರುವ ಕುರಿತು ಅಮೆರಿಕ ಗುಪ್ತಚರ ಇಲಾಖೆ ನೀಡಿರುವ ವರದಿಯನ್ನು ಪ್ರಕರಣ...

ನವದೆಹಲಿ: 2007ರ ಭಾರತದ ಸಂಜೌತಾ ಎಕ್ಸ್‌ಪ್ರೆಸ್ ರೈಲು ಸ್ಪೋಟ ಪ್ರಕರಣದಲ್ಲಿ ಲಷ್ಕರ್-ಇ- ತೊಯಿಬಾ ಸಂಘಟನೆಯ ಕೈವಾಡವಿರುವ ಕುರಿತು ಅಮೆರಿಕ ಗುಪ್ತಚರ ಇಲಾಖೆ ನೀಡಿರುವ ವರದಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಪಂಚಕುಲ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದೆ
2007 ಸಂಜೌತಾ ಎಕ್ಸ್‌ಪ್ರೆಸ್ ರೈಲು ಸ್ಪೋಟ ಪ್ರಕರಣದಲ್ಲಿ ಪಾಕಿಸ್ತಾನ ಮೂಲದ ಮೂಲದ ಆರಿಫ್ ಖಸ್ಮಾನಿ ನೇತೃತ್ವದ ಲಷ್ಕರ್-ಇ- ತೊಯಿಬಾ ಸಂಘಟನೆಯ ನೇರ ಕೈವಾಡವಿರುವ ಕುರಿತು ಈ ಹಿಂದೆ ಅಮೆರಿಕ ಗುಪ್ತಚರ ಇಲಾಖೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಇದೀಗ ಈ ವರದಿಯನ್ನು ಸಾಕ್ಷ್ಯವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ದಳ ಈ ವರದಿ ಪ್ರತಿಯನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಚಕುಲ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತಿದೆ.
ಸಂಝೋತಾ ಎಕ್ಸ್‌ಪ್ರೆಸ್ ಬಾಂಬಿಂಗ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಪಂಚಕುಲ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳವು ಅಮೆರಿಕದ ಗುಪ್ತಚರ ದಳ ಈ ಕುರಿತಾಗಿ ಸಿದ್ದಪಡಿಸಿದ್ದ ವರದಿಯನ್ನು ಉಲ್ಲೇಖೀಸಲಿದೆ. ಈ ಸ್ಫೋಟ ಪ್ರಕರಣದಲ್ಲಿ ಅಂದಿನ ಯುಪಿಎ ಸರ್ಕಾರವು ಸ್ವಾಮಿ ಆಸೀಮಾನಂದ ಸೇರಿದಂತೆ ಇತರ ಕೆಲವು ಹಿಂದೂ ಮುಖಂಡರನ್ನು ಸಿಲುಕಿಸುವ ಹುನ್ನಾರ ನಡೆಸಿತ್ತು ಮತ್ತು ಈ ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರವನ್ನು ಅದು ತನಿಖೆ ಮಾಡುವ ಗೋಜಿಗೇ ಹೋಗಿರಲಿಲ್ಲ ಎಂದು ಕೆಲವು ಹಿಂದೂ ಸಮೂಹಗಳು ಈಚೆಗೆ ಆರೋಪಿಸಿದ್ದವು ಎಂದು ಖಾಸಗಿ ಪತ್ರಿಕೆ ವರದಿ ಮಾಡಿತ್ತು.
ಇನ್ನು ಪ್ರಕರಣದ ಪ್ರಮುಖ ರೂವಾರಿ ಆರಿಫ್ ಖಸ್ಮಾನಿ ಕುರಿತ ವಿವರಗಳನ್ನು ನೀಡುವಂತೆ 2010ರಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ ಅಮೆರಿಕ ಗುಪ್ತಚರ ಸಂಸ್ಥೆಗೆ ಕೇಳಿತ್ತು. ಆದರೆ ಅಮೆರಿಕದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಅಮೆರಿಕ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿರುವ ವರದಿಯನ್ನು ಪಂಚಕುಲ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


