ದೇಶ

ಭಾರತದಲ್ಲಿ ಅತ್ಯಾಚಾರ ಹೆಚ್ಚಾಗಲು ನೆಹರು, ಗಾಂಧಿ ಕುಟುಂಬವೇ ಕಾರಣ!

ದೇಶದಲ್ಲಿ ಅತ್ಯಾಚಾರ ಹೆಚ್ಜಾಗಲು ನೆಹರು ಮತ್ತು ಗಾಂಧಿ ಕುಟುಂಬವೇ ಕಾರಣ. ಇರಾಖ್‌ನಲ್ಲಿ ಸದ್ದಾಂ ಹುಸೇನ್‌ನ ಪ್ರತಿಮೆಯನ್ನು ಜನರು ಕೆಡವಿ ಪುಡಿ ಪುಡಿ ಮಾಡಿದಂತೆ...

ಭಾರತದಲ್ಲಿ ಅತ್ಯಾಚಾರ ಹೆಚ್ಚಾಗಲು ನೆಹರು, ಗಾಂಧಿ ಕುಟುಂಬವೇ ಕಾರಣ!
ಗ್ಯಾನ್ ದೇವ್ ಅಹುಜಾ
Published On :
ಜೈಪುರ್:  ಜೆಎನ್‌ಯು ಕ್ಯಾಂಪಸ್‌ನಲ್ಲಿ  ವಿದ್ಯಾರ್ಥಿಗಳು ಮದ್ಯ ಸೇವನೆ ಮಾಡಿ ಬೆತ್ತಲೆ ತಿರುಗುತ್ತಾರೆ, ಸೆಕ್ಸ್ ಮಾಡುತ್ತಾರೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಭಾರತೀಯ ಜನತಾ ಪಕ್ಷದ ಶಾಸಕ ಗ್ಯಾನ್ ದೇವ್ ಅಹುಜಾ ಈಗ ಮತ್ತೊಂದು ಹೇಳಿಕೆಯ ಮೂಲಕ ವಿವಾದಕ್ಕೀಡಾಗಿದ್ದಾರೆ. 
ದೇಶದಲ್ಲಿ ಅತ್ಯಾಚಾರ ಹೆಚ್ಜಾಗಲು ನೆಹರು ಮತ್ತು ಗಾಂಧಿ ಕುಟುಂಬವೇ ಕಾರಣ. ಇರಾಖ್‌ನಲ್ಲಿ ಸದ್ದಾಂ ಹುಸೇನ್‌ನ ಪ್ರತಿಮೆಯನ್ನು ಜನರು ಕೆಡವಿ ಪುಡಿ ಪುಡಿ ಮಾಡಿದಂತೆ ಗಾಂಧಿ ಹೆಸರಲ್ಲಿರುವ ಪ್ರತಿಮೆಗಳನ್ನು ಸ್ಮಾರಕಗಳನ್ನು ತಕ್ಷಣವೇ ಪುಡಿ ಮಾಡಬೇಕೆಂದು ಅಲಾವರ್ ರಾಮಗಢದ ಬಿಜೆಪಿ ಶಾಸಕ ಗ್ಯಾನ್‌ದೇವ್ ಅಹುಜಾ ಆದೇಶಿಸಿದ್ದಾರೆ. 
ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇವತಾ ಮನುಷ್ಯ ಎಂದು ಹೇಳುವ ಈ ಶಾಸಕ, ಮೋದಿ ಎಲ್ಲಾ ಅನಿಷ್ಟಗಳನ್ನು ದೂರ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಅಹುಜಾರ ಈ ಹೇಳಿಕೆಗೆ ರಾಜಸ್ತಾನದ ಕಾಂಗ್ರೆಸ್ ಘಟಕ ಪ್ರತಿಕ್ರಿಯಿಸಿದ್ದು, ಗ್ಯಾನ್‌ದೇವ್‌ಗೆ ಮಂಡೆ ಸಮ ಇಲ್ಲ, ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿದೆ.
ಈ ಹಿಂದೆ ದೆಹಲಿಯಲ್ಲಿ ಶೇ. 50ರಷ್ಟು ಅತ್ಯಾಚಾರ ಮತ್ತು ದೌರ್ಜನ್ಯ ನಡೆಯುವುದಕ್ಕೆ ಜೆಎನ್‌ಯು ವಿದ್ಯಾರ್ಥಿಗಳೇ ಕಾರಣ ಎಂದಿದ್ದರು. ಅಷ್ಟೇ ಅಲ್ಲ, ಜೆಎನ್‌ಯು ಕ್ಯಾಂಪಸ್‌ನಲ್ಲಿ 3,000 ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಇಂಜೆಕ್ಷನ್ ಗಳನ್ನು ದಿನ ನಿತ್ಯ ಬಳಸಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ನಮ್ಮ ಮಗಳು ಮತ್ತು ಸಹೋದರಿಯರೊಂದಿಗೆ ಈ ರೀತಿ ಅಸಭ್ಯ ವರ್ತನೆಗಳನ್ನು ಮಾಡುತ್ತಾರೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.