ದೇಶ

ವಿಶಾಖಪಟ್ಟಣಂ ಫಾರ್ಮಾ ಸಿಟಿಯಲ್ಲಿ ಅಗ್ನಿ ಅನಾಹುತ,10 ಮಂದಿಗೆ ಗಾಯ

ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ಪರಿಣಾಮ 10 ಮಂದಿ ತೀವ್ರ ಗಾಯಗೊಂಡು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವಿಶಾಖ ಪಟ್ಟಣಂ ...

ವಿಶಾಖಪಟ್ಟಣಂ ಫಾರ್ಮಾ ಸಿಟಿಯಲ್ಲಿ ಅಗ್ನಿ ಅನಾಹುತ,10 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
Published On :

ವಿಶಾಖ ಪಟ್ಟಣಂ: ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ಪರಿಣಾಮ 10 ಮಂದಿ ತೀವ್ರ ಗಾಯಗೊಂಡು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವಿಶಾಖ ಪಟ್ಟಣಂ ಹೊರವಲಯದಲ್ಲಿ ನಡೆದಿದೆ.

ವಿಶಾಖಪಟ್ಟಣಂನ ಪಾರ್ವಾಡದ ಜವಹರ್ ಲಾಲ್ ನೆಹರೂ ಫಾರ್ಮಾ ಸಿಟಿಯ ಶ್ರೀಕರ್ ಲ್ಯಾಬೋರೇಟರಿಯಲ್ಲಿ ಅಮೋನಿಯಂ ನೈಟ್ರೇಟ್ ಇದ್ದ ಟ್ಯಾಂಕ್ ಸ್ಫೋಟಗೊಂಡಿದೆ. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಸಿಬ್ಬಂದಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ವಿಶಾಖಪಟ್ಟಣಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದ ಕಾರ್ಮಿಕರು ಘಟನೆಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಬೆಂಕಿ ಬೇರೆಡೆ ಹಬ್ಬಿಕೊಳ್ಳಲು ಬಿಡದೇ ಶೀಘ್ರವಾಗಿ ನಂದಿಸಿದ್ದರಿಂದ ಹೆಚ್ಚಿನ ಪ್ರಮಾಣದ ಸಾವುನೋವನ್ನು ತಪ್ಪಿಸಿದಂತಾಗಿದೆ.

ಕಳೆದ ಏಪ್ರಿಲ್ 27 ರಂದು ದುವ್ವಡಾದಲ್ಲಿರುವ ಬಯೋಮ್ಯಾಕ್ಸ್ ಫ್ಯೂಯೆಲ್ಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಒಂದು ತಿಂಗಳಲ್ಲೇ ಎರಡು ಅಗ್ನಿ ಅನಾಹುತಗಳು ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.