ಪಾಕ್ ಕ್ಷಿಪಣಿ ದಾಳಿಗೆ ಉತ್ತರಿಸುವ ಸಾಮರ್ಥ್ಯ ಭಾರತಕ್ಕಿಲ್ಲ: ತಜ್ಞರಿಂದ ಎಚ್ಚರಿಕೆ
ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಭಾರತಕ್ಕೆ ಇಲ್ಲ ಎಂದು ರಷ್ಯಾದ ಪರಮಾಣು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ...

ಇಸ್ಲಾಮಾಬಾದ್: ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಭಾರತಕ್ಕೆ ಇಲ್ಲ ಎಂದು ರಷ್ಯಾದ ಪರಮಾಣು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಮಾಸ್ಕೋದ ಅಣ್ವಸ್ತ್ರ ಪ್ರಸರಣ ತಡೆ ಕೇಂದ್ರದ ಹಿರಿಯ ಸಂಶೋಧಕ ಪೀಟರ್ ಟೊಪಿಚಿಕನೊವ್ ಅವರು ಈ ಬಗ್ಗೆ ಮಾತನಾಡಿದ್ದು, ಒಂದು ವೇಳೆ ಪಾಕಿಸ್ತಾನ ಭಾರತದ ಮೇಲೆ ತನ್ನ ಕ್ಷಿಪಣಿ ದಾಳಿ ಮಾಡಿದರೆ ಬಹುಶಃ ಭಾರತ ಆ ದಾಳಿಯನ್ನು ಸಮರ್ಥವಾಗಿ ತಡೆಯಲು ವಿಫಲವಾಗಬಹುದು ಎಂದು ಹೇಳಿದ್ದಾರೆ.
ಕ್ಷಿಪಣಿ ನಿರೋಧಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಸ್ರೇಲ್ ಜತೆಗೆ ಭಾರತ ಸಹಭಾಗಿತ್ವ ಹೊಂದಿದ್ದು, ರಷ್ಯಾದ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ಮುಂದಾಗಿದೆ. ಹೀಗಿದ್ದರೂ, ಪಾಕಿಸ್ತಾನದ ಕ್ಷಿಪಣಿಯನ್ನು ಸಮರ್ಥವಾಗಿ ಎದುರಿಸಲು ಭಾರತ ಇನ್ನಷ್ಟು ದೂರ ಕ್ರಮಿಸಬೇಕಿದೆ ಎಂದು ಟೊಪಿಚಿಕನೊವ್ ಹೇಳಿದ್ದಾರೆ. ಅಂತೆಯೇ ತಮ್ಮ ಮಾತು ಮುಂದುವರೆಸಿರುವ ಟೊಪಿಚಿಕನೊವ್ "ಮುಂದಿನ 10 ವರ್ಷಗಳಲ್ಲಿ ಪರಮಾಣು ಅಸ್ತ್ರಗಳನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಭಾರತವು ಅಪಾರ ಹಣ ವ್ಯಯಿಸುತ್ತಿದೆ. ಹೀಗಿದ್ದರೂ ಭಾರತ-ಪಾಕ್ ಎರಡೂ ರಾಷ್ಟ್ರಗಳ ನಡುವೆ ಅಣ್ವಸ್ತ್ರ ಯುದ್ಧ ನಡೆದಲ್ಲಿ, ಪಾಕ್ ದಾಳಿ ಎದುರಿಸಲು ಭಾರತಕ್ಕೆ ಸಾಮರ್ಥ್ಯವಿದೆಯೇ ಎಂಬುದನ್ನು ಊಹಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಪರಮಾಣು ಪೂರೈಕೆದಾರ ರಾಷ್ಟ್ರಗಳ ಪಟ್ಟಿಗೆ ಭಾರತ; ಟೊಪಿಚಿಕನೊವ್ ವಿರೋಧ
ಇದೇ ವೇಳೆ ಪರಮಾಣು ಪೂರೈಕೆದಾರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನು ಸೇರ್ಪಡೆಗೊಳಿಸುತ್ತಿರುವ ಬಗ್ಗೆ ಟೊಪಿಚಿಕನೊವ್ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ನಡೆ ಕುರಿತಂತೆ ಉಳಿದ ರಾಷ್ಟ್ರಗಳು ಎಚ್ಚರಿಕೆ ನಿಲುವು ಪ್ರದರ್ಶಿಸಬೇಕು. ದೆಹಲಿಯಿಂದ ಯಾವುದೇ ಬದಲಾವಣೆ ನಾವು ಕಾಣುತ್ತಿಲ್ಲ. ತನ್ನ ನೀತಿಗಳಲ್ಲಾಗಲಿ ವಿಧಾನಗಳಲ್ಲಿ ಭಾರತ ಬದಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಪರಮಾಣು ಪೂರೈಕೆದಾರರ ಸಮೂಹಕ್ಕೆ ಸೇರಲು ಭಾರತ ಸಜ್ಜಾಗಿದ್ದು, ವಿಶ್ವದ ಆತಂಕದ ಹೊರತಾಗಿಯೂ ಪರಮಾಣು ಚಟುವಟಿಕೆಗಳಲ್ಲಿ ಭಾರತ ತನ್ನ ಬದ್ಧತೆ ಮುಂದುವರಿಸಿದೆ. ಕಳೆದ ಭಾನುವಾರ ಒಡಿಶಾದ ಕರಾವಳಿ ತೀರದಲ್ಲಿ ನಡೆಸಿದ ಸ್ವದೇಶಿ ನಿರ್ಮಿತ ಸೂಪರ್‌ಸಾನಿಕ್ ಪ್ರತಿಬಂಧಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


