ದೇಶ

ಬಿಹಾರದಲ್ಲಿ ಮತ್ತೊಬ್ಬ ಪತ್ರಕರ್ತನಿಗೆ ಪ್ರಾಣ ಬೆದರಿಕೆ

ಪತ್ರಕರ್ತ ರಾಜ್ ದೇವ್ ರಂಜನ್ ಹತ್ಯೆ ನಡೆದ ಕೆಲವೇ ದಿನಗಳ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತನಿಗೆ ಪ್ರಾಣ ಬೆದರಿಕೆ...

ಬಿಹಾರದಲ್ಲಿ ಮತ್ತೊಬ್ಬ ಪತ್ರಕರ್ತನಿಗೆ ಪ್ರಾಣ ಬೆದರಿಕೆ
ಸಾಂದರ್ಭಿಕ ಚಿತ್ರ
Published On :
ಬಿಹಾರ: ಪತ್ರಕರ್ತ ರಾಜ್ ದೇವ್ ರಂಜನ್ ಹತ್ಯೆ ನಡೆದ ಕೆಲವೇ ದಿನಗಳ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತನಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ. 
ಜೆಡಿಯು ಎಂಎಲ್ ಸಿ ಹೀರಾ ಪ್ರಸಾದ್ ಬಿಂದ್ ಮತ್ತು ಅವರ ಬೆಂಬಲಿಗರು ಪತ್ರಕರ್ತ ರಾಜೇಶ್ ಸಿಂಗ್ ಅವರಿಗೆ ಬೆದರಿಕೆ ಹಾಕಿದ್ದಾರೆ. 
ಕಚೇರಿಗೆ ಬಂದ ಕೆಲ ಅಪರಿಚಿತ ವ್ಯಕ್ತಿಗಳು ಪಂಚಾಯತ್ ಚುನಾವಣೆ ವೇಳೆ ಮತದಾರರಿಗೆ ಹಾಕಲಾಗಿದೆ ಎಂಬುದಕ್ಕೆ ಆಧಾರವೇನಿದೆ ಎಂದು ಪ್ರಶ್ನಿಸಿದ ಅವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ರಾಜೇಶ್ ಸಿಂಗ್ ಹೇಳಿದ್ದಾರೆ. 
ಪಂಚಾಯತ್ ಚುನಾವಣೆಯಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿ ಮಾಡಿದ್ದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಒಳ ಮಾಹಿತಿ ಆಧಾರದ ಮೇರೆಗೆ ವರದಿ ಮಾಡಿದ್ದೆ. ಆದಾದ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ. 
ಇದ್ದಕ್ಕಿದ್ದಂತೆ ಕಚೇರಿಗೆ ಬಂದ ಕೆಲವರು, ರಾಜ್ ದೇವ್ ರಂಜನ್ ಗೆ ಯಾವ ಗತಿಯಾಯಿತೋ ಅದೇ ಗತಿ ನಿನಗೂ ಆಗುತ್ತದೆ. ಕೂಡಲೇ ಹೀರಾ ಬಿಂದ್ ವಿರುದ್ಧ ಬರೆಯುವುದನ್ನು ನಿಲ್ಲಿಸಿ ಕ್ಷಮೆಯಾಚಿಸು, ಇಲ್ಲವಾದಲ್ಲಿ ರಂಜನ್ ಮಾದರಿ ಹತ್ಯೆಯಾಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರಾಜೇಶ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.