ರಾಜಸ್ತಾನದಲ್ಲಿ 51 ಡಿಗ್ರಿ ಉಷ್ಣಾಂಶ: ಸಾರ್ವಕಾಲಿಕ ದಾಖಲೆ ಬರೆದ ಭಾರತ
ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗುತ್ತಿದ್ದು, ಗುರುವಾರ ರಾಜಸ್ಥಾನದ ಫಲೋಡಿಯಲ್ಲಿ 51...

Published On :
ಜೈಪುರ: ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗುತ್ತಿದ್ದು, ಗುರುವಾರ ರಾಜಸ್ಥಾನದ ಫಲೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ದೇಶದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ.
ಈ ಹಿಂದೆ 1886ರಲ್ಲಿ 50.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ದೇಶದ ಇದುವರೆಗಿನ ಅತ್ಯಧಿಕ ಉಷ್ಣತೆಯಾಗಿತ್ತು. ಆದರೆ ಗುರುವಾರ ಫಲೋಡಿ ಉಷ್ಣತೆ ಅದನ್ನು ಮೀರಿಸಿದೆ.
ಗುಜರಾತ್ ನ ಅಹಮದಾಬಾದ್ ನಗರದಲ್ಲೂ ಉಷ್ಣತೆ 48 ಡಿಗ್ರಿ ದಾಖಲಾಗಿದೆ. ಇದು 100 ವರ್ಷಗಳಲ್ಲೇ ಹೆಚ್ಚು. ಇನ್ನು ರಾಜಧಾನಿ ದೆಹಲಿ 43 ಡಿಗ್ರಿ ಉಷ್ಣಾಂಶ ದಾಖಲಿಸಿದೆ.
ರಾಜಸ್ಥಾನದ ಬಾಢಮೇರ್‌ನಲ್ಲಿ 49.6, ಗಂಗಾನಗರದಲ್ಲಿ 49.1, ಚುರುವಿನಲ್ಲಿ 50.2, ಜೈಸಲ್ಮೇರ್‌ನಲ್ಲಿ 49 ಡಿಗ್ರಿ ತಾಪ ದಾಖಲಾಗಿದ್ದು, ಬದುಕನ್ನು ಅಸಹನೀಯವಾಗಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


