ದೇಶ

ಬಂಧಿತ ಗೃಹ ಸಚಿವಾಲಯದ ಅಧಿಕಾರಿ ಅಮಾನತು

ಭ್ರಷ್ಟಾಚಾರ ಆರೋಪದಡಿ ಸಿಬಿಐ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯ ಅಧೀನ ಕಾರ್ಯದರ್ಶಿ ಆನಂದ್ ಜೋಶಿ...

ಬಂಧಿತ ಗೃಹ ಸಚಿವಾಲಯದ ಅಧಿಕಾರಿ ಅಮಾನತು
ದೆಹಲಿಯ ಪಟಿಯಾಲಾ ಕೋರ್ಟ್ ಗೆ ಗೃಹ ಸಚಿವಾಲಯ ಅಧೀನ ಕಾರ್ಯದರ್ಶಿ ಆನಂದ್ ಜೋಶಿ ಅವರನ್ನು ಹಾಜರುಪಡಿಸಲಾಯಿತು.
Published On :

ನವದೆಹಲಿ: ಭ್ರಷ್ಟಾಚಾರ ಆರೋಪದಡಿ ಸಿಬಿಐ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯ ಅಧೀನ ಕಾರ್ಯದರ್ಶಿ ಆನಂದ್ ಜೋಶಿ ಅವರನ್ನು ಬಂಧಿಸಲಾಗಿದ್ದು, ಇದೀಗ ಸೇವೆಯಿಂದ ಅಮಾನತಿನಲ್ಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐನಿಂದ ಸಮ್ಮನ್ಸ್ ಬಂದ ಮೇಲೆ ಜೋಶಿಯವರು ಉತ್ತರ ಪ್ರದೇಶದ ಗಜಿಯಾಬಾದ್ ನಲ್ಲಿರುವ ತಮ್ಮ ಮನೆಯಿಂದ ಕಾಣೆಯಾಗಿದ್ದರು. ಅವರನ್ನು ಮೊನ್ನೆ 15ರಂದು ಪಶ್ಚಿಮ ದೆಹಲಿಯಲ್ಲಿ ಬಂಧಿಸಲಾಗಿತ್ತು.

ಜೋಶಿಯವರನ್ನು ಇತ್ತೀಚೆಗೆ ವಿದೇಶಾಂಗ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA)ಯ ಕಡತಗಳು ಕಾಣೆಯಾಗಿದ್ದವು. ನಂತರ ತಪಾಸಣೆ ಮಾಡಿ ಅವುಗಳನ್ನು ಸಚಿವಾಲಯಕ್ಕೆ ವಾಪಸ್ ತರಿಸಲಾಗಿತ್ತು. ಸರ್ಕಾರೇತರ ಸಂಘಟನೆಯ ಕೆಲಸಕ್ಕಾಗಿ ಅವರು ಲಂಚ ತೆಗೆದುಕೊಂಡ ಆರೋಪ ಅವರ ಮೇಲಿದೆ.

ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರಡಿ ಅಪರಾಧ ಮತ್ತು ಪಿತೂರಿ ನಡೆಸಿದ ಆರೋಪ ಅವರ ಮೇಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.