ಆನೈತಿಕ ಸಂಬಂಧ ತಿರಸ್ಕರಿಸಿದ ಪಶು ವೈದ್ಯ: ಕುಪಿತಗೊಂಡ ಮಹಿಳೆಯಿಂದ ಆ್ಯಸಿಡ್ ದಾಳಿ
ಅನೈತಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ ಮಹಿಳೆಯ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡ ಆಕೆ ಪಶು ವೈದ್ಯನ ಮೇಲೆ ಆ್ಯಸಿಡ್ ...

ಗಾಜಿಯಾಬಾದ್: ಅನೈತಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ ಮಹಿಳೆಯ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡ ಆಕೆ ಪಶು ವೈದ್ಯನ ಮೇಲೆ ಆ್ಯಸಿಡ್ ಹಾಕಿರುವ ಆಘಾತಕಾರಿ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ.
28 ವರ್ಷದ ಅಮಿತ್ ವರ್ಮಾ ಅವರ ಮೇಲೆ ಸೋಮವಾರ ಬೆಳಗ್ಗೆ 45 ವರ್ಷದ ಮಹಿಳೆ ಆ್ಯಸಿಡ್ ಎರಚಿದ್ದಾಳೆ. ಕಳೆದ ಎರಡು ವಾರಗಳಿಂದ ತನ್ನ ಜೊತೆ ಸಂಬಂಧ ಇರಿಸಿಕೊಳ್ಳುವಂತೆ ಮಹಿಳೆ ಪೀಡಿಸುತ್ತಿದ್ದಳು. ಇದಕ್ಕೆ ಅಮಿತ್ ವರ್ಮಾ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳೆ ನಿನ್ನೆ ಬೆಳಗ್ಗೆ ಈ ಕೃತ್ಯ ನಡೆಸಿದ್ದಾಳೆ.
ನಿನ್ನೆ ಬೆಳಗ್ಗೆ ಅಮಿತ್ ವರ್ಮಾ ತಾವು ವಾಸಿಸುತ್ತಿದ್ದ ಮನೆಯ ರೂಂ ಒಂದರಲ್ಲಿ ನಾಯಿಗಳಿಗಾಗಿ ಕ್ಲಿನಿಕ್ ಇಟ್ಟುಕೊಂಡಿದ್ದರು. ಸೋಮವಾರ ಬೆಳಗ್ಗೆ 8 ಗಂಟೆಗೆ ಬಂದ ಮಹಿಳೆ ಅಮಿತ್ ವರ್ಮಾ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ ಎಂದು ಅಮಿತ್ ವರ್ಮಾ ಅವರ ರೂಮ್ ಮೇಟ್ ದೀಪಕ್ ಎಂಬಾತ ತಿಳಿಸಿದ್ದಾರೆ.
ಕೂಡಲೇ ಅವರನ್ನು ಕೌಶುಂಬಿಯ ಯಶೋದಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಮಿತ್ ವರ್ಮಾ ಅವರು ಶೇ.40 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನೂ ಅಮಿತ್ ವರ್ಮಾ ಹೇಳಿಕೆ ದಾಖಲಿಸುವ ಸ್ಥಿತಿಯಲ್ಲಿಲ್ಲದ ಕಾರಣ ಪೊಲೀಸರಿ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


