ಭಾರತದಲ್ಲಿ ಅಸ್ಥಿತ್ವಕ್ಕಾಗಿ 25 ಮಂದಿ ನೇಮಕ ಮಾಡಿದ ಇಸಿಸ್
ವಿಶ್ವದ ಶ್ರೀಮಂತ ಭಯೋತ್ಪಾದಕ ಸಂಘಟನೆ ಇಸಿಸ್ ಭಾರತದಲ್ಲಿಯೂ ತನ್ನ ಜಾಲ ವಿಸ್ತರಿಸಲು ಮುಂದಾಗಿದ್ದು, ಐವರು ಮಹಿಳೆಯರು ಸೇರಿದಂತೆ ಒಟ್ಟು 25 ಮಂದಿ ಭಯೋತ್ಪದಕರನ್ನು ನೇಮಕ ಮಾಡಿಕೊಂಡಿದೆ ಎಂದು ಭದ್ರತಾ ಸಂಸ್ಥೆಗಳ ವರದಿಗಳು ತಿಳಿಸಿವೆ.

ನವದೆಹಲಿ: ವಿಶ್ವದ ಶ್ರೀಮಂತ ಭಯೋತ್ಪಾದಕ ಸಂಘಟನೆ ಇಸಿಸ್ ಭಾರತದಲ್ಲಿಯೂ ತನ್ನ ಜಾಲ ವಿಸ್ತರಿಸಲು ಮುಂದಾಗಿದ್ದು, ಐವರು ಮಹಿಳೆಯರು ಸೇರಿದಂತೆ ಒಟ್ಟು 25 ಮಂದಿ ಭಯೋತ್ಪದಕರನ್ನು ನೇಮಕ ಮಾಡಿಕೊಂಡಿದೆ ಎಂದು ಭದ್ರತಾ ಸಂಸ್ಥೆಗಳ ವರದಿಗಳು ತಿಳಿಸಿವೆ.
ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಪ್ರಭಾವ ಹೊಂದಿರುವ ಮತ್ತು ವಿಶ್ವವನ್ನೇ ನಡುಗಿಸಿರುವ ಭಯೋತ್ಪಾದಕ ಸ೦ಘಟನೆ ಇಸ್ಲಾಮಿಕ್ ಸ್ಟೇಟ್ಸ್ ಭಾರತದಲ್ಲಿ ತನ್ನ ಜಾಲ ವಿಸ್ತರಿಸಲು 25 ಜನರನ್ನು ನಿಯೋಜಿಸಿದೆ ಎ೦ದು ಮೂಲಗಳು ತಿಳಿಸಿವೆ. ಈ ಪ್ಯೆಕಿ ಐವರು ಮಹಿಳಾ ಭಯೋತ್ಪಾದಕರೂ ಇದ್ದು, ಎಲ್ಲ 25 ಜನರು ವಿದೇಶಗಳಿ೦ದಲೇ ಕಾರ್ಯ ನಿವ೯ಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಭಾರತದಲ್ಲಿ ಇಸಿಸ್ ಜಾಲ ವಿಸ್ತರಣೆಗೆ ನಿಯೋಜನೆಗೊಂಡಿರುವ ಉಗ್ರರು ಫಿಲಿಪೀನ್ಸ್, ಕೀನ್ಯಾ, ಅಜೆ೯೦ಟೀನಾ, ಶ್ರೀಲ೦ಕಾ ಮತ್ತು ಇ೦ಡೋನೇಷ್ಯಾಗಳಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿಂದಲೇ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಸ೦ಘಟನೆಯ ಪರವಾದ ಯುವಕ ಯುವತಿಯರನ್ನು ಆಕರ್ಷಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭದ್ರತಾ ಸಂಸ್ಥೆಗಳ ಮೂಲಗಳ ಪ್ರಕಾರ ಇಸಿಸ್ ಉಗ್ರ ಸಂಘಟನೆಯ ನಿಯೋಜಿತರು ಪ್ರಮುಖವಾಗಿ ಮುಸ್ಲಿಂ ಯುವಕ-ಯುವತಿಯರನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದು, ಯುಎ೦ಎ೦ ಎ೦ಬ ಕೋಡ್ ನೇಮ್‍ನಿ೦ದ ಇವರು ಕಾರ್ಯನಿವ೯ಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ಯೆಕಿ ಬಹುತೇಕರು ಈ ಹಿ೦ದೆ ಹಲವು ಬಾರಿ ಭಾರತಕ್ಕೆ ಆಗಮಿಸಿ ತಮ್ಮ ಸ೦ಪರ್ಕವನ್ನು ವಿಸ್ತರಿಸಿಕೊ೦ಡಿದ್ದವರಾಗಿದ್ದು, ಭಾರತದಲ್ಲಿಯೂ ಇವರ ಸಂಪರ್ಕಜಾಲ ಹರಡಿದೆ ಎಂದು ಗುಪ್ತಚರ ಮಾಹಿತಿಯಿಂದ ತಿಳಿದುಬಂದಿದೆ.
ಇಸಿಸ್ ಕುರಿತ ಗುಪ್ತಚರ ಮಾಹಿತಿಯಾಧಾರಗ ಮೇಲೆ ಈಗಾಗಲೇ ಟಕಿ೯ ಮತ್ತು ಸಿರಿಯಾಗೆ ತೆರಳುತ್ತಿದ್ದ ಕೆಲವು ಯುವಕರನ್ನು ಭಾರತೀಯ ಗುಪ್ತಚರ ದಳದ ಅಧಿಕಾರಿಗಳು ಬಂಧಿಸಿ ಇವರ ಪ್ರಯತ್ನಕ್ಕೆ ಈ ಹಿಂದೆ ಬ್ರೇಕ್ ಹಾಕಿದ್ದರು. ಇದೀಗ ಮತ್ತೆ ಪುಟಿದೆದ್ದು ನಿಂತಿರುವ ಇಸಿಸ್ ನಿಯೋಜಿತರು, ಭಾರತೀಯ ಭದ್ರತಾ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತೀರಾ ವ್ಯವಸ್ಥಿತ ರೂಪದಲ್ಲಿ ಯುವಕರನ್ನು ನೇಮಿಸಿಕೊಳ್ಳುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೊರೆ ಹೋದ ಇಸಿಸ್
ಇನ್ನು ತನ್ನ ಉಗ್ರ ಜಾಲವನ್ನು ಪಸರಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವ ಇಸಿಸ್, ಇ೦ಟನೆ೯ಟ್‍ನಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಹೊಸ ಅಪ್ಲಿಕೇಶನ್ ತಯಾರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಐಸಿಸ್‍ಗೆ ಸ೦ಬ೦ಧಿಸಿದ ಸುದ್ದಿಗಳು, ಶಿರಚ್ಚೇದ ಮಾಡಿದ ವಿಡಿಯೋ ಗಳನ್ನು ಪ್ರಕಟಿಸಲಾಗುತ್ತಿದೆಯಂತೆ. ಅಮಾಕ್ ನ್ಯೂಸ್ ಎ೦ಬ ಅಪ್ಲಿಕೇಶನ್ ಅನ್ನು ಇಸಿಸ್ ಅಭಿವೃದ್ಧಿ ಪಡಿಸಿದ್ದು, ಇದು ಐಸಿಸ್ ಉಗ್ರ ಸ೦ಘಟನೆ ಅಸ್ತಿತ್ವವಿರುವ ಪ್ರದೇಶದಲ್ಲಿ ಮಾತ್ರವೇ ಕಾರ್ಯನಿವ೯ಹಿಸುತ್ತವೆ ಎಂದು ತಿಳಿದುಬಂದಿದೆ.
ಕೇವಲ ಇದು ಮಾತ್ರವಲ್ಲದೇ ಮಕ್ಕಳಿಗಾಗಿ ಇಸಿಸ್ ಜಿಹಾದಿ ಆ್ಯಪ್ ಅನ್ನು ಹೊರತಂದಿದ್ದು, ಮಕ್ಕಳಿಗೆ ಜಿಹಾದಿ ಶಿಕ್ಷಣ ನೀಡಿ ಉಗ್ರವಾದದ ಕಡೆ ಸೆಳೆಯಲು ಇದೇ ಮೊದಲ ಬಾರಿಗೆ ಐಸಿಸ್ ಉಗ್ರ ಸ೦ಘಟನೆ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆಯಂತೆ. ಅಂಗ್ಲ ವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ತನ್ನ ಅಜೆಂಡಾಗೆ ಬಳಸಿಕೊಳ್ಳಲಾಗುತ್ತಿದ್ದು, ಜಿ ಫಾರ್ ಗನ್, ಟಿ ಫಾರ್ ಟ್ಯಾ೦ಕ್, ಆರ್ ಫಾರ್ ರಾಕೆಟ್‍ನ೦ಥ ಪದಗಳನ್ನು ಈ ಆ್ಯಪ್ ಮೂಲಕ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ. ಅರೇಬಿಕ್‍ನಲ್ಲಿ ಅತ್ಯ೦ತ ಜನಪ್ರಿಯ ಮಕ್ಕಳ ಹಾಡಿನಲ್ಲಿ ಐಸಿಸ್ ಸಿದ್ಧಾ೦ತಗಳ ಸಾಲುಗಳನ್ನು ಸೇರಿಸಲಾಗಿದ್ದು, ಟೆಲಿಗ್ರಾ೦ನ೦ಥ ಕಡತ ವಿನಿಮಯ ಆ್ಯಪ್‍ಗಳ ಮೂಲಕ ಐಸಿಸ್ ಆ್ಯಪ್ ಅನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಈ ಹಿ೦ದೆಯೂ ಐಸಿಸ್ ಉಗ್ರವಾದ ಪ್ರಚಾರಕ್ಕೆ ಹಲವು ಆ್ಯಪ್‍ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಮಕ್ಕಳನ್ನು ಗುರಿಯಾಗಿಟ್ಟುಕೊ೦ಡು ಇದೇ ಮೊದಲ ಬಾರಿಗೆ ಆ್ಯಪ್ ಬಿಡುಗಡೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


