ಅಗಸ್ಟಾ ಹಗರಣ: ಮಾಜಿ ಪ್ರಧಾನಿ ಸಿಂಗ್, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿಲ್ಲ ಎಂದ ಕ್ರಿಶ್ಚಿಯನ್ ಮೈಕೆಲ್
ಸೋನಿಯಾ ಗಾಂಧಿಯನ್ನಾಗಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನಾಗಲಿ ಭೇಟಿ ಮಾಡಿಲ್ಲ ಎಂದು ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಒಪ್ಪಂದದ ಮಧ್ಯವರ್ತಿ, ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ತಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನಾಗಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನಾಗಲಿ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿವಿಐಪಿ ಹೆಲಿಕಾಫ್ಟರ್ ಖರೀದಿ ಒಪ್ಪಂದವನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನಾಗಲಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅಥವಾ ರಕ್ಷಣಾ ಮಂತ್ರಿಯಾಗಿದ್ದ ಎಕೆ ಆಂಟನಿಯವರನ್ನಾಗಲೀ ಭೇಟಿ ಮಾಡಿ ಮಾತನಾಡಿಲ್ಲ ಎಂದು ಕ್ರಿಶ್ಚಿಯನ್ ಮೈಕೆಲ್ ಅಬುಧಾಬಿಯ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಇನ್ನು ಭಾರತೀಯ ವಾಯುಪಡೆ ಮುಖ್ಯಸ್ಥ ಎಸ್ ಪಿ ತ್ಯಾಗಿಯನ್ನು ಒಮ್ಮೆ ಭೇಟಿ ಮಾಡಿ ಹಸ್ತಲಾಘವ ನೀಡಿದ್ದೆ, ಆದರೆ ತ್ಯಾಗಿ ಅವರಿಗೆ ಇಟಾಲಿಯ ಉದ್ಯಮಿ ಹಾಗೂ ಮತ್ತೋರ್ವ ಮಧ್ಯವರ್ತಿಯೊಂದಿಗೆ ಸಂಪರ್ಕವಿದ್ದ ಹಿನ್ನೆಲೆಯಲ್ಲಿ ತ್ಯಾಗಿ ಅವರಿಂದ ಅಂತರ ಕಾಯ್ದುಕೊಂಡಿದ್ದೆ ಎಂದು ಕ್ರಿಶ್ಚಿಯನ್ ಮೈಕೆಲ್ ಹೇಳಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವನ್ನಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಅವರ ಬಗ್ಗೆಯೂ ಮಾತನಾಡಿರುವ ಮೈಕೆಲ್, ಸ್ವಾಮಿ ಸುಳ್ಳು ಹೇಳುತ್ತಿಲ್ಲ. ಆದರೆ ಅವರನ್ನು ಯಾರೋ ದಿಕ್ಕು ತಪ್ಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಎಜಿ ವರದಿಯನ್ನಾಧರಿಸಿ ಸುಬ್ರಹ್ಮಣಿಯನ್ ಸ್ವಾಮಿ ಆರೋಪ ಮಾಡುತ್ತಿದ್ದಾರೆ. ಆದರೆ ಸಿಎಜಿ ವರದಿಯನ್ನು ತರಾತುರಿಯಲ್ಲಿ ಸಿದ್ಧಪಡಿಸಲಾಗಿದ್ದು, ಅದನ್ನು ಸಿದ್ಧಪಡಿಸಿದವರ್ಯಾರೂ ವೈಮಾನಿಕ ತಜ್ಞರಲ್ಲ, ಅವರು ಅಧಿಕಾರಿಗಳು ಆದ್ದರಿಂದ ಅವರ ಪರಿಣತಿಯನ್ನು ಮೀರಿದ ವಿಷಯದಲ್ಲಿ ವರದಿ ನೀಡಿದ್ದು ಸುಬ್ರಹ್ಮಣಿಯನ್ ಸ್ವಾಮಿ ಅವರು ಸಿಎಜಿ ವರದಿಯಿಂದ ದಿಕ್ಕುತಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


