ದೇಶ

ಉಜ್ಜಯಿನಿ ಕುಂಭಮೇಳದಲ್ಲಿ ದಲಿತ ಸಾಧುಗಳೊಂದಿಗೆ ಅಮಿತ್ ಶಾ ಪವಿತ್ರ ಸ್ನಾನ

ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭಮೇಳದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದಲಿತ ಸಾಧು ಹಾಗೂ ಇತರರೊಂದಿಗೆ ಪವಿತ್ರ...

ಉಜ್ಜಯಿನಿ ಕುಂಭಮೇಳದಲ್ಲಿ ದಲಿತ ಸಾಧುಗಳೊಂದಿಗೆ ಅಮಿತ್ ಶಾ ಪವಿತ್ರ ಸ್ನಾನ
ದಲಿತ ಸಾಧುಗಳೊಂದಿಗೆ ಅಮಿತ್ ಶಾ
Published On :
ಉಜ್ಜಯಿನಿ: ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭಮೇಳದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದಲಿತ ಸಾಧು ಹಾಗೂ ಇತರರೊಂದಿಗೆ ಪವಿತ್ರ ಸ್ನಾನ ಮಾಡಿದರು.
ಅಮಿತ್ ಶಾ ಅವರು ಸುಮಾರು ಒಂದು ತಿಂಗಳ ಕಾಲ ನಡೆಯುವ ಸಿಂಹಸ್ತ ಕುಂಭ ಮೇಳದಲ್ಲಿ ಭಾಗವಹಿಸಲು ಇಂದು ಇಂದೋರ್ ನಿಂದ ಉಜ್ಜಯಿನಿಗೆ ಆಗಮಿಸಿದ ಶಾ,  ಶಿಪ್ರ ನದಿಯ ವಾಲ್ಮಿಕಿ ಘಾಟ್ ನಲ್ಲಿ ದಲಿತ ಸಾಧುಗಳೊಂದಿಗೆ ಪವಿತ್ರ ಸ್ನಾನ ಮಾಡಿದರು,
ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ದಲಿತರಿಗಾಗಿ ಆರ್ಎಸ್ಎಸ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಅಧ್ಯಕ್ಷರು ದಲಿತ ಸಾಧುಗಳೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಅಮಿತ್ ಶಾ ಅವರೊಂದಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ಇತರೆ ಬಿಜೆಪಿ ನಾಯಕರು ಪವಿತ್ರ ಸ್ನಾನ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.