ದೇಶ

ಯುವಕನ ಗುಂಡಿಕ್ಕಿ ಹತ್ಯೆ ಪ್ರಕರಣ: ಎಂಎಲ್ ಸಿ ಪುತ್ರನ ಬಂಧನ

ಜೆಡಿಯು ರಾಜಕಾರಣಿಯ ಮಗ ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕಾಗಿ...

ಯುವಕನ ಗುಂಡಿಕ್ಕಿ ಹತ್ಯೆ ಪ್ರಕರಣ: ಎಂಎಲ್ ಸಿ ಪುತ್ರನ ಬಂಧನ
ಮನೋರಮಾ ದೇವಿ ಪುತ್ರ ರಾಕಿ ಯಾದವ್(ಚಿತ್ರಕೃಪೆ-ಫೇಸ್ ಬುಕ್)
Published On :
ಗಯಾ: ಜೆಡಿಯು ರಾಜಕಾರಣಿಯ ಮಗ ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣ ಸಂಬಂಧ ಎಂಎಲ್ ಸಿ ಮನೋರಮಾ ದೇವಿ ಪುತ್ರ ರಾಕಿ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 
ನಿನ್ನೆ ರಾಕಿ ಅಂಗರಕ್ಷಕನನ್ನು ಬಂಧಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ರಾಕಿ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ನಂತರ ಪರಾರಿಯಾಗಿದ್ದ ರಾಕಿ ಗಯಾದಿಂದ 15 ಕಿ.ಮೀ ದೂರದಲ್ಲಿರುವ ಬುಧ್ಧಗಯಾದಲ್ಲಿರುವ ತಂದೆಯ ನಿವಾಸದಲ್ಲಿ ಅವಿತಿದ್ದನು. ಪೊಲೀಸರು ಆತನನ್ನು ಇಂದು ಬೆಳಿಗ್ಗೆ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಬಿಹಾರದ ಖ್ಯಾತ ಉದ್ಯಮಿಯೊಬ್ಬರ 19ರ ಹರೆಯದ ಮಗ ಆದಿತ್ಯ ಸಚ್‌ದೇವ ಗುಂಡಿಗೆ ಬಲಿಯಾದ ದುರ್ದೈವಿ. ಈಗಷ್ಟೇ 12 ನೇ ತರಗತಿಯ ಪರೀಕ್ಷೆ ಮುಗಿಸಿದ್ದ ಆದಿತ್ಯ, ತನ್ನ ಗೆಳೆಯರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಜೆಡಿಯು ನಾಯಕಿ ಮನೋರಮಾ ದೇವಿ ಅವರಿಗೆ ಸೇರಿದ ರೇಂಜ್ ರೋವರ್‌ನ್ನು ಆದಿತ್ಯನ ಕಾರು ಓವರ್‌ಟೇಕ್ ಮಾಡಿತ್ತು. ಮನೋರಮಾ ದೇವಿ ಅವರು ಬಿಹಾರದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು,ಅವರ ಪತಿ ಬಿಂದಿ ಯಾದವ್ ಕುಖ್ಯಾತ ಗೂಂಡಾ ಆಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.