ದೇಶ

ಜಾತಿ, ಧರ್ಮದ ಮೇಲಾಟದಲ್ಲಿ ಬಳಕೆಯಾಗಲಿಲ್ಲ ಸಚಿನ್ ನೀಡಿದ ರು. 1 ಕೋಟಿ ದೇಣಿಗೆ

ಮಹಾರಾಷ್ಟ್ರದ ಔರಾಂಗಾಬಾದ್ ಜಿಲ್ಲೆಯ ಬರಪೀಡಿತ ವಕ್ಲಾ ಗ್ರಾಮಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 2014 ರಲ್ಲಿ ಸಂಸದರ ನಿಧಿಯಿಂದ...

ಜಾತಿ, ಧರ್ಮದ ಮೇಲಾಟದಲ್ಲಿ ಬಳಕೆಯಾಗಲಿಲ್ಲ ಸಚಿನ್ ನೀಡಿದ ರು. 1 ಕೋಟಿ ದೇಣಿಗೆ
ಸಚಿನ್ ತೆಂಡೂಲ್ಕರ್
Published On :

ನವದೆಹಲಿ: ಮಹಾರಾಷ್ಟ್ರದ ಔರಾಂಗಾಬಾದ್ ಜಿಲ್ಲೆಯ ಬರಪೀಡಿತ ವಕ್ಲಾ ಗ್ರಾಮಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 2014 ರಲ್ಲಿ ಸಂಸದರ ನಿಧಿಯಿಂದ 1 ಕೋಟಿ ರೂ ಹಣವನ್ನು ದೇಣಿಗೆಯಾಗಿ ನೀಡಿದ್ದರು.

ಆದರೆ ಈ ಗ್ರಾಮದ ಜನರು 1 ಕೋಟಿ ಹಣವನ್ನು ಹಂಚಿಕೊಳ್ಳಲು ಸಭೆ ಸೇರಿದ್ದರು. ಜೊತೆಗೆ ಹೇಗೆ ಹಣವನ್ನು ಖರ್ಚು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿದರು ಎಂದು ಸಚಿನ್ ತೆಂಡೂಲ್ಕರ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ  ಸಚಿನ್ ತೆಂಡೂಲ್ಕರ್ ನೀಡಿದ ಒಂದು ಕೋಟಿ ರು. ದೇಣಿಗೆಯನ್ನು ಅವರವರಲ್ಲೇ, ಧರ್ಮ ಜಾತಿ, ಹಾಗೂ  ಯಾವ ರಾಜಕೀಯ ಪಕ್ಷಗಳ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಗುರುತಿಸಿ ಹಂಚಿಕೊಳ್ಳಬೇಕಾಗಿ ತೀರ್ಮಾನಿಸಲಾಯ್ತು. ಆದರೆ ಇದಕ್ಕೆ ಯಾರು ಒಮ್ಮತ ನೀಡದ ಕಾರಣ, ಸಚಿನ್ ನೀಡಲು ಬಯಸಿದ್ದ 1 ಕೋಟಿ ರು ದೇಣಿಗೆ ಹಣ ಅಲ್ಲಿಯೇ ಉಳಿಯಿತು ಯಾರು ಬಂದು ಹಣವನ್ನು ಸ್ವೀಕರಿಸಿಲ್ಲ ಎಂಬುದು ತಿಳಿದು ಬಂದಿದೆ.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ನಡೆಸುತ್ತಿರುವ ಬರಪೀಡಿತ ಮರಾಠವಾಡದ ಹಿಂದಿನ ಕತೆಗಳ ಬಗ್ಗೆ ಸಂಶೋಧನೆಯಿಂದ ಈ ವಿಷಯ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.