ಭವಿಷ್ಯ ನಿಧಿ ಖಾತೆಗಳಲ್ಲಿ ರು. 43 ಸಾವಿರ ಕೋಟಿ ಹಣ ನಿಷ್ಕ್ರಿಯವಾಗಿ ಉಳಿದಿದೆ
ಭವಿಷ್ಯ ನಿಧಿ ಖಾತೆಗಳಲ್ಲಿ ರು. 43 ಸಾವಿರ ಕೋಟಿ ಹಣ ನಿಷ್ಕ್ರಿಯ ಉಳಿದ್ದಿದ್ದು, ಆ ಹಣಕ್ಕೆ ಬಡ್ಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ...

Published On :
ನವದೆಹಲಿ: ಭವಿಷ್ಯ ನಿಧಿ ಖಾತೆಗಳಲ್ಲಿ ರು. 43 ಸಾವಿರ ಕೋಟಿ ಹಣ ನಿಷ್ಕ್ರಿಯ ಉಳಿದ್ದಿದ್ದು, ಆ ಹಣಕ್ಕೆ ಬಡ್ಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಬಂಡಾರು ದತ್ತಾತ್ತ್ರೇಯ ಅವರು ಲೋಕಸಭೆಯ ಪ್ರಶ್ನಾವಳಿ ಸುತ್ತಿನಲ್ಲಿ ಈ ವಿಷಯವನ್ನು ಹೇಳಿದ್ದಾರೆ.
ಇಪಿಎಫ್ ಖಾತೆಗಳಲ್ಲಿ ಸುಮಾರು ರು. 43 ಸಾವಿರ ಕೋಟಿ ಹಣವು ನಿಷ್ಕ್ರಿಯವಾಗಿ ಉಳಿದಿದೆ. ಅಲ್ಲದೇ, 2015–16ರಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಮೂಲಕ 1.18 ಕೋಟಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಶೇಕಡ 98ರಷ್ಟು ಪ್ರಕರಣಗಳನ್ನು ಅರ್ಜಿ ಸಲ್ಲಿಸಿದ 20 ದಿನಗಳಲ್ಲಿಯೇ ಮುಕ್ತಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Lok SabhaಲೋಕಸಭೆBandaru DattatreyaEmployees\' Provident Fund Organisationಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಬಂಡಾರು ದತ್ತಾತ್ತ್ರೇಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


