ದೇಶ

ಮನೆಕೆಲಸದವಳ ಮೇಲೆ ಹಲ್ಲೆ: ಸೌದಿ ಅರೇಬಿಯಾದಲ್ಲಿ ತೆಲಂಗಾಣ ಯುವತಿ ಸಾವು

ಸೌದಿ ಅರೇಬಿಯಾಗೆ ಮನೆಕೆಲಸಕ್ಕಾಗಿ ತೆರಳಿದ್ದ ತೆಲಂಗಾಣ ಯುವತಿ ಮನೆ ಮಾಲೀಕರಿಂದ ಹಲ್ಲೆಗೊಳಗಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ...

ಮನೆಕೆಲಸದವಳ ಮೇಲೆ ಹಲ್ಲೆ: ಸೌದಿ ಅರೇಬಿಯಾದಲ್ಲಿ ತೆಲಂಗಾಣ ಯುವತಿ ಸಾವು
ಮೃತ ಆಸೀಮ್ ಖಾನ್
Published On :

ತೆಲಂಗಾಣ: ಸೌದಿ ಅರೇಬಿಯಾಗೆ ಮನೆಕೆಲಸಕ್ಕಾಗಿ ತೆರಳಿದ್ದ ತೆಲಂಗಾಣ ಯುವತಿ ಮನೆ ಮಾಲೀಕರಿಂದ ಹಲ್ಲೆಗೊಳಗಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೈದರಾಬಾದ್ ನ ಅಸಿಮಾ ಖಾಟೂನ್ ಮೃತ ಯುವತಿ. ಮನೆ ಮಾಲೀಕರಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗಳಿಂದ ಬಳಲುತ್ತಿದ್ದ ಈಕೆ ರಿಯಾದ್ ನ ಕಿಂಗ್ ಸೌದ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾಳೆ.

ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಆಸೀಮಾ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇನ್ನೂ ಆಸೀಮಾ ಪೋಷಕರು ತೆಲಂಗಾಣ ಕಾರ್ಯದರ್ಶಿಗೆ ಈ ವಿಷಯ ತಿಳಿಸಿದ್ದಾರೆ.  ಆಸೀಮಾ ತನ್ನ ಪೋಷಕರಿಗೆ ಕರೆ ಮಾಡಿ ತನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾಳೆ.

ಡಿಸೆಂಬರ್ 2015 ರಂದು ದಾಬೀರ್ ಪುರ್ ನ ಶಾಹ್ ಕಾಲೋನಿ ನಿವಾಸಿ ಆಸೀಮಾ, 90 ದಿನಗಳ ಬ್ಯುಸಿನೆಸ್ ವೀಸಾದ ಮೇಲೆ ರಿಯಾದ್ ಗೆ ತೆರಳಿದ್ದಳು. ಹೈದರಾಬಾದ್ ನಿಂದ ಹೊರಟ ನಂತರ ಆಕೆಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರಲಿಲ್ಲ,

ಎರಡು ತಿಂಗಳ ಹಿಂದೆ ತನ್ನ ಪೋಷಕರಿಗೆ ಕರೆ ಮಾಡಿದ ಆಸೀಮಾ ತನಗೆ ಮನೆ ಮಾಲೀಕರು ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದಳು. ಜತೆಗೆ ವಾಪಸ್ ತನ್ನನ್ನು ಕರೆಸಿಕೊಳ್ಳುವಂತೆ ಕುಟುಂಬಸ್ಥರಲ್ಲಿ ಮನವಿ ಮಾಡಿದ್ದಳು. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.