ದೇಶ

ತನ್ನನ್ನು ಹುತಾತ್ಮ ಯೋಧನಿಗೆ ಹೋಲಿಸಿಕೊಂಡ ಹಾರ್ದಿಕ್ ಪಟೇಲ್

ದೇಶದ್ರೋಹದ ಆರೋಪದಲ್ಲಿ ಅಕ್ಟೋಬರ್ ತಿಂಗಳಿನಿಂದ ಸೂರತ್‌ನಲ್ಲಿ ಜೈಲು ವಾಸ ಅನುಭವಿಸುತ್ತಿರುವ 22ರ ಹರೆಯದ ಹಾರ್ದಿಕ್ ಪಟೇಲ್...

ತನ್ನನ್ನು ಹುತಾತ್ಮ ಯೋಧನಿಗೆ ಹೋಲಿಸಿಕೊಂಡ ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Published On :
ಗುಜರಾತ್: ದೇಶದ್ರೋಹದ ಆರೋಪದಲ್ಲಿ ಅಕ್ಟೋಬರ್ ತಿಂಗಳಿನಿಂದ ಸೂರತ್‌ನಲ್ಲಿ ಜೈಲು ವಾಸ ಅನುಭವಿಸುತ್ತಿರುವ 22ರ ಹರೆಯದ 
ತನ್ನನ್ನು ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟಿರುವ ಯೋಧನಿಗೆ ಹೋಲಿಸಿಕೊಂಡಿದ್ದಾನೆ.
ಅಮ್ಮಂದಿನ ದಿನದ ಪ್ರಯುಕ್ತ ತನ್ನ ಹೆತ್ತವರಿಗೆ ಬರೆದ ಪತ್ರವೊಂದರಲ್ಲಿ ನೀನು ನಿನ್ನ ಮಗನಿಗಾಗಿ ಕಣ್ಣೀರು ಹಾಕಬೇಡ. ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟುಕೊಂಡ ನೂರಾರು ಯೋಧರು ತಮ್ಮ ಅಮ್ಮ ಮತ್ತು ಕುಟುಂಬದಿಂದ ದೂರದಲ್ಲಿದ್ದಾರೆ. ಅವರು ದೇಶ ಸೇವೆ ಮಾಡುತ್ತಾ ಹುತಾತ್ಮರಾಗುತ್ತಾರೆ, ನೀನು ಅಳಬೇಡ ಎಂದು ಹಾರ್ದಿಕ್ ತನ್ನ ಅಮ್ಮನಿಗೆ ಸಾಂತ್ವನ ಹೇಳಿದ್ದಾರೆ.
 ತಮಗೆ ಮೀಸಲಾತಿ ನೀಡಬೇಕೆಂದು ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯರ ಮುಂದಾಳತ್ವ ವಹಿಸಿ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಹಲವಾರು ಪ್ರದೇಶಗಳಲ್ಲಿ ಸಂಘರ್ಷವೇರ್ಪಟ್ಟಿದ್ದು, ಇದರಿಂದ ಗುಜರಾತ್ ಸರ್ಕಾರಕ್ಕೆ  ಸುಮಾರು ರು. 100 ಕೋಟಿಯಷ್ಟು ನಷ್ಟವುಂಟಾಗಿತ್ತು. ಹೋರಾಟಗಳು, ಸಂಘರ್ಷಗಳು ತೀವ್ರವಾಗುತ್ತಿದ್ದಂತೆ ರಾಷ್ಟ್ರದ್ರೋಹದ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.