ಹಿಂದೂ ನಾಯಕರನ್ನು ಹತ್ಯೆ ಮಾಡಿದರೆ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ನೌಕರಿ: ದಾವೂದ್ ನ ಡಿ ಕಂಪನಿಯ ಆಮಿಷ
ಡಿ-ಕಂಪನಿ ಕೋಮುಗಲಭೆ ಸೃಷ್ಟಿಸಿ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡುವುದಕ್ಕೆ ಒಡ್ಡಿದ ಆಮಿಷಗಳೂ ಬಹಿರಂಗವಾಗತೊಡಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹವಣಿಸುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಡಿ-ಕಂಪನಿ ಕೋಮುಗಲಭೆ ಸೃಷ್ಟಿಸಿ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡುವುದಕ್ಕೆ ಒಡ್ಡಿದ ಆಮಿಷಗಳೂ ಬಹಿರಂಗವಾಗತೊಡಗಿದೆ.
ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಿ ಕೋಮುಗಲಭೆ ಸೃಷ್ಟಿ ಮಾಡುವುದಕ್ಕಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದವರಿಗೆ ದಕ್ಷಿಣ ಆಫ್ರಿಕಾದಲ್ಲಿ ಹಣ ಹಾಗೂ ಉತ್ತಮ ನೌಕರಿ ಕೊಡಿಸುವುದಾಗಿ ಡಿ ಕಂಪನಿ ಆಮಿಷವೊಡ್ಡುತ್ತಿತ್ತು ಎಂದು ಅಹಮದಾಬಾದ್ ಕೋರ್ಟ್ ಗೆ ಎನ್ ಐಎ ಸಲ್ಲಿಸಿರುವ ವರದಿಯಲ್ಲಿ ಹೇಳಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.
ಕೋಮು ಗಲಭೆ ಸೃಷ್ಟಿಸಲೆಂದೇ ನೇಮಕವಾದವರಿಗೆ ಭಾರತದಲ್ಲಿ ಪೆಟ್ರೋಲ್ ಬಾಂಬ್ ಗಳನ್ನು ಸ್ಫೋಟಿಸಲು ಹಾಗೂ ಚರ್ಚ್ ಗಳ ಮೇಲೆ ದಾಳಿ ನಡೆಸಲು ಸೂಚನೆ ನೀಡಲಾಗುತ್ತಿತ್ತು ಎಂದು ವರದಿಯ ಮೂಲಕ ತಿಳಿದುಬಂದಿದೆ. ಇನ್ನು ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಲು ಡಿ-ಕಂಪನಿಯ ಪ್ರಮುಖ ಪಾತಕಿಗಳಾದ ಜಾವೆದ್ ಚಿಕ್ನ ಅವರಿಗೆ ನೀಡಲಾಗಿದ್ದ 50 ಲಕ್ಷ ರೂ, ದುಬೈ ನಿಂದ ಹವಾಲ ಮೂಲಕ ಗುಜರಾತ್ ಗೆ ಕಳಿಸಲಾಗಿತ್ತು ಎಂಬುದೂ ಬಹಿರಂಗವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


