ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಸಿಆರ್ ಪಿಎಫ್ ನಿಂದ 560 ಮಹಿಳಾ ಸಿಬ್ಬಂದಿ ನೇಮಕ
ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಲು 560 ಮಹಿಳಾ ಕಮಾಂಡರ್ ನ್ನು...

ನವದೆಹಲಿ: ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಲು 560 ಮಹಿಳಾ ಕಮಾಂಡರ್ ನ್ನು ನೇಮಿಸಲು ದೇಶದ ಅತಿದೊಡ್ಡ ಅರೆಸೈನಿಕ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ನಿರ್ಧರಿಸಿದೆ.
ದೇಶದ ಅತ್ಯಂತ ಸವಾಲಿನ ಆಂತರಿಕ ಭದ್ರತಾ ವಿಭಾಗವನ್ನು ಪ್ರವೇಶಿಸಲು ಮಹಿಳೆಯರು ಸಿದ್ಧರಾಗಿದ್ದಾರೆ. ಕಳೆದ ವಾರ ರಾಜಸ್ತಾನದ ಅಜ್ಮೀರ್ ನಲ್ಲಿರುವ ಕೇಂದ್ರ ಮೀಸಲು ಪಡೆಯಿಂದ 567 ಮಹಿಳೆಯರು ತರಬೇತಿ ಮುಗಿಸಿಕೊಂಡು ಹೊರಬಂದಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾ ನಿರ್ದೇಶಕ ಕೆ.ದುರ್ಗಾ ಪ್ರಸಾದ್, ಮಹಿಳಾ ಪಡೆಯ ವಿಭಾಗಗಳನ್ನು ಮಾಡಲಾಗಿದ್ದು, ಮೊದಲ ಹಂತದಲ್ಲಿ 100 ಮಹಿಳೆಯರನ್ನು ನೇಮಕಗೊಳಿಸಲಾಗುವುದು. ಆರಂಭದ ವರ್ಷಗಳಲ್ಲಿ ಅವರಿಗೆ ಕಠಿಣ ತರಬೇತಿ, ಕೆಲಸ ನೀಡಲಾಗುವುದು. ಅವರ ನೇಮಕಾತಿ ಪ್ರಕ್ರಿಯೆಗಳು, ಮೂಲ ಸೌಕರ್ಯ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


