ಅಗಸ್ಟಾ ವೆಸ್ಟ್ ಲ್ಯಾಂಡ್ ಏಕೈಕ ಬಿಡ್ಡರ್ ಆಗುವ ಪರಿಸ್ಥಿತಿ ನಿರ್ಮಿಸಿದ್ದ ಯುಪಿಎ: ಮನೋಹರ್ ಪರಿಕ್ಕರ್
ಯುಪಿಎ ಸರ್ಕಾರ ವಿವಿಐಪಿ ಹೆಲಿಕಾಫ್ಟರ್ ಪೂರೈಕೆ ಒಪ್ಪಂದದಲ್ಲಿ ಒಂದೇ ಮಾರಾಟ ಸಂಸ್ಥೆ ಇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪ ಮಾಡಿದ್ದಾರೆ.

ನವದೆಹಲಿ: ಯುಪಿಎ ಸರ್ಕಾರ ವಿವಿಐಪಿ ಹೆಲಿಕಾಫ್ಟರ್ ಪೂರೈಕೆ ಒಪ್ಪಂದದಲ್ಲಿ ಒಂದೇ ಮಾರಾಟ ಸಂಸ್ಥೆ ಇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಮಾತನಾಡಿದ ಮನೋಹರ್ ಪರಿಕ್ಕರ್, ಹಗರಣದ ಸಂಬಂಧ ಸಿಬಿಐ 2013 ರ ಮೇ ತಿಂಗಳಲ್ಲೇ ಎಫ್ಐಆರ್ ದಾಖಲಿಸಿತ್ತು. ಆದರೆ ಸಿಬಿಐ ನ ಎಫ್ಐ ಆರ್ ಪ್ರತಿಯನ್ನು 2013 ರ ಡಿಸೆಂಬರ್ ವರೆಗೂ ಜಾರಿ ನಿರ್ದೇಶನಾಲಯಕ್ಕೆ ಕಳಿಸಿರಲಿಲ್ಲ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಹಗರಣ ನಡೆದರೂ ಯುಪಿಎ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ, ನಂತರ 2014 ರಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಅರುಣ್ ಜೇಟ್ಲಿ ರಕ್ಷಣಾ ಸಚಿವರಾದಾಗ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣವನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡಿತು ಎಂದು ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಮುಂದುವರೆದು ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮನೋಹರ್ ಪರಿಕ್ಕರ್, ಅವ್ಯವವಹಾರ ನಡೆದಿದೆ ಎಂಬುದು ತಿಳಿದ ನಂತರವೂ ಯುಪಿಎ ಸರ್ಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಗೆ ಮೂರು ಹೆಲಿಕಾಫ್ಟರ್ ಗಳನ್ನು ಪೂರೈಕೆ ಮಾಡಲು ಅವಕಾಶ ಮಾಡಿತ್ತು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


