ದೇಶ

ಗೋಹತ್ಯೆ ನಿಷೇಧಕ್ಕೆ ಬಾಂಬೆ ಹೈಕೋರ್ಟ್ ಓಕೆ; ಗೋಮಾಂಸ ಸಂಗ್ರಹಕ್ಕೂ ಓಕೆ

ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದ್ದು, ಹೊರಗಿನಿಂದ ಗೋಮಾಂಸ ಖರೀದಿಸುವುದಕ್ಕೆ ನಿಷೇಧ ವಿಧಿಸಿರುವುದನ್ನು ಅಸಾಂವಿಧಾನಿಕ ಎಂದಿದೆ.

ಗೋಹತ್ಯೆ ನಿಷೇಧಕ್ಕೆ ಬಾಂಬೆ ಹೈಕೋರ್ಟ್ ಓಕೆ; ಗೋಮಾಂಸ ಸಂಗ್ರಹಕ್ಕೂ ಓಕೆ
ಗೋಹತ್ಯೆ ನಿಷೇಧಕ್ಕೆ ಬಾಂಬೆ ಹೈಕೋರ್ಟ್ ಓಕೆ; ಗೋಮಾಂಸ ಮಾರಾಟಕ್ಕೂ ಓಕೆ
Published On :

ಮುಂಬೈ: ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದ್ದು, ಹೊರಗಿನಿಂದ ಗೋಮಾಂಸ ಖರೀದಿಸುವುದಕ್ಕೆ (ಸಂಗ್ರಹ) ನಿಷೇಧ ವಿಧಿಸಿರುವುದನ್ನು ಅಸಾಂವಿಧಾನಿಕ ಎಂದು ಹೇಳಿದೆ.
ಗೋಮಾಂಸ ಖರೀದಿಯನ್ನು(ಸಂಗ್ರಹ) ಅಪರಾಧದ ಪರಿಧಿಯಿಂದ ಹೊರಗಿಟ್ಟ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ.ಸುರೇಶ್ ಗುಪ್ಟೆ, ಅಭಯ್ ಓಕಾ ಅವರಿದ್ದ  ಬಾಂಬೆ ಹೈಕೋರ್ಟ್ ನ ವಿಭಾಗೀಯ ಪೀಠ, ಗೋಮಾಂಸ ಖರೀದಿಸುವುದನ್ನು ಅಪರಾಧೀಕರಣಗೊಳಿಸಿರುವುದು ಅಸಾಂವಿಧಾನಿಕ ಎಂದು ಹೇಳಿದೆ. 
ಮಹಾರಾಷ್ಟ್ರ ಸರ್ಕಾರ 2015 ರ ಮಾರ್ಚ್ ನಲ್ಲಿ ಗೋಹತ್ಯೆ, ಗೋಮಾಂಸ ನಿಷೇಧ ಕಾನೂನನ್ನು ಜಾರಿಗೊಳಿಸಿತ್ತು. ಕಾನೂನು ಉಲ್ಲಂಘನೆ ಮಾಡಿದವರಿಗೆ 10 ಸಾವಿರ ರೂಪಾಯಿ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಕಾನೂನಿನ ಸೆಕ್ಷನ್ 5 ಡಿ ಪ್ರಕಾರ ಮಹಾರಾಷ್ಟ್ರದಲ್ಲಿ ಗೋಹತ್ಯೆ ಮಾಡದೆ ಹೊರಗಿನಿಂದ ಗೋಮಾಂಸ ಖರೀದಿಸುವುದೂ ಸಹ ಅಪರಾಧವಾಗಿತ್ತು. ಈ ಅಪರಾಧ ಎಸಗಿದವರಿಗೆ 2 ,000 ರೂ ದಂಡ ಹಾಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದಿತ್ತು.
ಗೋಹತ್ಯೆ ನಿಷೇಧ ಕಾನೂನಿನ ಸೆಕ್ಷನ್ 5 ಡಿ (ಗೋಮಾಂಸ ಖರೀದಿಯ ಅಪರಾಧೀಕರಣವನ್ನು)ಯನ್ನು ವಿರೋಧಿಸಿ ಹಲವು ಅರ್ಜಿಗಳು ಕೋರ್ಟ್ ಗೆ ಸಲ್ಲಿಕೆಯಾಗಿದ್ದವು. ಆದರೆ ಗೋಹತ್ಯೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಗೋಮಾಂಸ ನಿಷೇಧವನ್ನೂ ಹೇರಬೇಕೆಂದು ಮಹಾರಾಷ್ಟ್ರ ಸರ್ಕಾರ ವಾದ ಮಂಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.