ಬಡವರಾದ ನಮಗೆ ನ್ಯಾಯ ಕೊಡಿಸಿ: ಮೋದಿಗೆ ಅಪ್ರಾಪ್ತ ಬಾಲಕನ ಪತ್ರ
ನನ್ನ 12 ವರ್ಷದ ಪುಟ್ಟ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಬಡವರಾದ ನಮಗೆ ತಾವು ನ್ಯಾಯ ಕೊಡಿಸಬೇಕೆಂದು ಅಪ್ರಾಪ್ತನೊಬ್ಬ ಪ್ರಧಾನಿ ನರೇಂದ್ರ ...

ಜೈಪುರ: ನನ್ನ 12 ವರ್ಷದ ಪುಟ್ಟ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಬಡವರಾದ ನಮಗೆ ತಾವು ನ್ಯಾಯ ಕೊಡಿಸಬೇಕೆಂದು ಅಪ್ರಾಪ್ತನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.
ನನ್ನ ತಂಗಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಆರೋಪಿಗಳು ಇನ್ನು ಸಹ ಬಂಧಿಸಲ್ಪಟ್ಟಿಲ್ಲ. ತನಗೆ ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗದು ಹೀಗಾಗಿ ನೀವು ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿ, ಬಡವರಾದ ನಮೆಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾನೆ.
"ಅಂಕಲ್ ನನ್ನ ಪುಟ್ಟ ತಂಗಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಆದರೆ ಬಲೋತ್ರಾ ಪೊಲೀಸರು ಆರೋಪಿಗಳಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ. ನಾವು ಬಡವರಾಗಿರುವುದರಿಂದ ನಮ್ಮ ನೋವಿನ ಕೂಗು ಯಾರಿಗೂ ಕೇಳುತ್ತಿಲ್ಲ. ನಾನು ಜಿಲ್ಲಾಡಳಿತದ ಅಧಿಕಾರಿಗಳನ್ನು ಸಹ ಭೇಟಿ ಮಾಡಿ ದೂರು ನೀಡಲು ಪ್ರಯತ್ನಿಸಿದೆ. ಆದರೆ ನನ್ನ ದೂರಿಗೆ ಗಮನವೇ ಕೊಡದ ಅವರು ನಾವು ಬಡವರೆಂದು ಹೀಯಾಳಿಸಿ ಕಳುಹಿಸಿದರು".
ಒಂದು ಕಡೆ ನಿಮ್ಮ ಸರ್ಕಾರ ಬೇಟಿ ಬಚಾವೋ (ಹೆಣ್ಣುಮಕ್ಕಳನ್ನು ಉಳಿಸಿ) ಅಭಿಯಾನವನ್ನು ಕೈಗೊಳ್ಳುತ್ತಿದೆ. ಆದರೆ ರಾಜಸ್ಥಾನ್ ಸರ್ಕಾರ ನನ್ನ ತಂಗಿಯ ಮೇಲೆ ಅತ್ಯಾಚಾರ ವೆಸಗಿದವರನ್ನು ಬಂಧಿಸದೆ ಇಂತಹ ಅಭಿಯಾನಗಳ ಅಣಕವಾಡುತ್ತಿದೆ ಎಂದು ಅಪ್ರಾಪ್ತ ಬಾಲಕ ಪತ್ರದಲ್ಲಿ ಕಿಡಿಕಾರಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


