ಸಂಸದರ ವೇತನ ಶೇ. 100 ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ನಿರಾಕರಣೆ?
ಶೇ.100 ಸಂಸದರ ವೇತನ ಹೆಚ್ಚಳ ಕುರಿತ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಣ್ಣೀರು ಎರೆಚಿದ್ದಾರೆ...

ನವದೆಹಲಿ: ಶೇ.100 ಸಂಸದರ ವೇತನ ಹೆಚ್ಚಳ ಕುರಿತ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಣ್ಣೀರು ಎರೆಚಿದ್ದಾರೆ.
ಸಂಸದರ ವೇತನವನ್ನು 50 ಸಾವಿರದಿಂದ 1 ಲಕ್ಷ ರುಪಾಯಿವರೆಗೆ, ಕ್ಷೇತ್ರ ಭತ್ಯೆಯನ್ನು 45 ರಿಂದ 90 ಸಾವಿರ ರುಪಾಯಿವರೆಗೆ ಹೆಚ್ಚಳ ಸೇರಿದಂತೆ 60ಕ್ಕೂ ಹೆಚ್ಚು ಬೇಡಿಕೆಗಳಿಗೆ ಪ್ರಧಾನಿ ಅಸಮ್ಮತಿ ಸೂಚಿಸಿದ್ದಾರೆ ಎಂದು ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದರ ವೇತನ ಮತ್ತು ಸವಲತ್ತುಗಳ ಜಂಟಿ ಸಲಹಾ ಸಮಿತಿ ಸಂಸತ್ ಸದಸ್ಯರಿಗೆ ಶೇ. 100ರಷ್ಟು ವೇತನ ಹೆಚ್ಚಳ ಶಿಫಾರಸು ಮಾಡಿತ್ತು. ಈ ಪ್ರಸ್ತಾಪಗಳು ಪೂರ್ತಿಯಾಗಿ ಅಂಗೀಕಾರವಾದರೆ ಸಂಸದರಿಗೆ ನೀಡಲಾಗುವ ವೇತನ ಭತ್ಯೆಗಳ ಮೊತ್ತ 1,40,000 ರುಪಾಯಿಗಳಿಂದ 2,80,00 ರುಪಾಯಿಗಳಿಗೆ ಏರಿಕೆಯಾಗಲಿದೆ.
ಸಂಸದರ ವೇತನ ಮತ್ತು ಸವಲತ್ತುಗಳ ಜಂಟಿ ಸಲಹಾ ಸಮಿತಿ ನೀಡಿರುವ ಶಿಫಾರಸ್ಸಿನ ಪೈಕಿ ಪೈಕಿ ಶೇ. 75ರಷ್ಟನ್ನು ಸಂಸದೀಯ ವ್ಯವಹಾರಗಳ ಸಚಿವಾಲಯವು ನಿರಾಕರಿಸಿದೆ ಎಂದು ಮೂಲಗಳು ಹೇಳಿವೆ. ಇನ್ನು 5 ರಾಜ್ಯಗಳ ಚುನಾವಣಾ ಪ್ರಕ್ರಿಯೆ ಚಾಲನೆ ಇರುವಾಗ ಸಂಸದರ ವೇತನ ಪರಿಷ್ಕರಣೆ ಪ್ರಕ್ರಿಯೆಗೆ ಅಂಗೀಕಾರ ನೀಡಿದರೆ ಎಡಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಲಿರುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


