ದೇಶ

ಪಂಜಾಬ್‌ನಲ್ಲಿ ಕೇಜ್ರಿವಾಲ್‌ ಅಲೆ; 100 ಸ್ಥಾನಗಳಲ್ಲಿ ಆಮ್‌ ಆದ್ಮಿ ಗೆಲುವು: ಸಮೀಕ್ಷೆ

ರಾಷ್ಟ್ರರಾಜಧಾನಿ ದೆಹಲಿಯ ನಂತರ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಲೆ ಪಂಜಾನಲ್ಲಿ ಜೋರಾಗಿದ್ದು,...

ಪಂಜಾಬ್‌ನಲ್ಲಿ ಕೇಜ್ರಿವಾಲ್‌ ಅಲೆ; 100 ಸ್ಥಾನಗಳಲ್ಲಿ ಆಮ್‌ ಆದ್ಮಿ ಗೆಲುವು: ಸಮೀಕ್ಷೆ
ಅರವಿಂದ್ ಕೇಜ್ರಿವಾಲ್
Published On :
ಚಂಡೀಗಢ: ರಾಷ್ಟ್ರರಾಜಧಾನಿ ದೆಹಲಿಯ ನಂತರ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಲೆ ಪಂಜಾನಲ್ಲಿ ಜೋರಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಕನಿಷ್ಠ 100 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ನೂತನ ಸಮೀಕ್ಷೆಯೊಂದು ಹೇಳಿದೆ.
ಕಳೆದ ಫೆಬ್ರವರಿಯಲ್ಲಿ ಹಫಿನ್‌ಸ್ಟನ್‌ ಪೋಸ್ಟ್‌ ಹಾಗೂ ಸಿ ಓಟರ್‌ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದು, 2015ರ ಫೆಬ್ರವರಿಯಿಂದ ತೊಡಗಿ 2016ರ ಫೆಬ್ರವರಿ ವರೆಗಿನ ಅವಧಿಯಲ್ಲಿ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಮೇಲೆ ಮತದಾರರಿಗಿರುವ ಒಲವು ಗಟ್ಟಿಯಾಗುತ್ತಾ ಬಂದಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ.
ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಕ್ಷಕ್ಕೆ ಪಂಜಾಬ್‌ನ 117 ಸದಸ್ಯಬಲದ ಸದನದಲ್ಲಿ 94ರಿಂದ 100 ಸ್ಥಾನಗಳು ದೊರೆಯಲಿವೆ. 2015ರ ಎಪ್ರಿಲ್‌ನಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಆಪ್‌ ಗೆ 83ರಿಂದ 89 ಸ್ಥಾನಗಳು ಸಿಗುವುದಾಗಿ ತಿಳಿದುಬಂದಿತ್ತು.
ಈ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ 8ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ. ಈ ಮೊದಲಿನ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 12ರಿಂದ 18 ಸ್ಥಾನ ಪಡೆಯುವುದಾಗಿ ಸಮೀಕ್ಷೆ ತಿಳಿಸಿತ್ತು.
ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟಕ್ಕೆ ಕೇವಲ 6ರಿಂದ 12 ಸ್ಥಾನ ಪ್ರಾಪ್ತವಾಗಲಿವೆ. ಈ ಹಿಂದಿನ ಸಮೀಕ್ಷೆಯಲ್ಲಿ ಇದು 13ರಿಂದ 19 ಸ್ಥಾನಗಳೆಂದು ಗೊತ್ತಾಗಿತ್ತು.
ಒಂದು ವೇಳೆ ಇಂದೇ ಪಂಜಾಬ್‌ನಲ್ಲಿ ಚುನಾವಣೆ ಆದಲ್ಲಿ ಇಲ್ಲಿನ ಶೇ.48 ಮತದಾರರು ಆಮ್‌ ಆದ್ಮಿ ಪಕ್ಷಕ್ಕೇ ಮತ ಹಾಕುತ್ತಾರೆ.
2012ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಎಸ್‌ ಎ ಡಿ ಗೆ 56 ಸ್ಥಾನಗಳು ಲಭಿಸಿದ್ದವು. ಕಾಂಗ್ರೆಸ್‌ಗೆ 46 ಮತ್ತು ಬಿಜೆಪಿಗೆ 12 ಸ್ಥಾನಗಳು ಸಿಕ್ಕಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.