ದೇಶ

ದಲಿತ ಯುವಕನ ಮರ್ಯಾದಾ ಹತ್ಯೆ: ಯುವತಿಯ ತಾಯಿ ಪೊಲೀಸರಿಗೆ ಶರಣು

ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಯುವತಿಯ...

ದಲಿತ ಯುವಕನ ಮರ್ಯಾದಾ ಹತ್ಯೆ: ಯುವತಿಯ ತಾಯಿ ಪೊಲೀಸರಿಗೆ ಶರಣು
ಹತ್ಯೆಯಾದ ದಲಿತ ಯುವಕ ಹಾಗೂ ಆತನ ಪತ್ನಿ
Published On :

ತಮಿಳುನಾಡು: ದಲಿತನೋರ್ವ ತಮ್ಮ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆಂಬ ಕಾರಣಕ್ಕೆ ಯುವಕನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಯುವತಿಯ ತಾಯಿ ಪೊಲೀಸರಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

ತಮಿಳುನಾಡಿದ ತಿರುಪ್ಪೊರಿನ ಉದುಮಲೈಪೆಟ್ಟೈಯಲ್ಲಿ ಮಾರ್ಚ್ 13 ರಂದು ದಲಿತ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣದ ಸಿಸಿಟಿವಿಯ ದೃಶ್ಯವೊಂದು ಸಾಕಷ್ಟು ಸುದ್ದಿ ಮಾಡಿತ್ತು.

ದಲಿತ ಯುವಕನೊಬ್ಬ ತನ್ನ ಪತ್ನಿಯೊಂದಿಗೆ ರಸ್ತೆ ದಾಟುವ ವೇಳೆ ವಾಹನದಲ್ಲಿ ಬಂದಿರುವ ವ್ಯಕ್ತಿಗಳು ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಯುವಕ ಸಾವನ್ನಪ್ಪಿದ್ದ

ಶಂಕರ್ ಹತ್ಯೆಯಾಗಿದ್ದ ಯುವಕನಾಗಿದ್ದು, ಪೊಲ್ಲಾಚಿಯಲ್ಲಿ ಮೊದಲೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ. ಕೌಸಲ್ಯ ಉದಾಮಲ್ ಪೇಟೆಯಲ್ಲ ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಳು. ಕೌಸಲ್ಯ ಮೇಲ್ಜಾತಿಯ ಯುವತಿಯಾಗಿದ್ದು ಅವರ ಕುಟುಂಬಕ್ಕ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೂ ಶಂಕರ್ ಕೌಸಲ್ಯಳನ್ನು ವಿವಾಹವಾಗಿದ್ದ.

ಈ ಹಿನ್ನೆಲೆಯಲ್ಲಿ ಕೌಸಲ್ಯ ಸಂಬಂಧಿಕರು ಶಂಕರ್ ಮೇಲೆ ದಾಳಿ ಮಾಡಿದ್ದಾರು ಎಂದು ಹೇಳಲಾಗುತ್ತಿತ್ತು. ಹಲ್ಲೆ ನಡೆದ ಕೆಲವು ದಿನಗಳಲ್ಲೇ ಪೊಲೀಸರು 5 ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಯುವತಿಯ ತಾಯಿ ಪೊಲೀಸರ ಬಳಿ ಶರಣಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.