ಕೇಳದೆ ನೀರು ಕುಡಿದಿದ್ದಕ್ಕೆ ಚಲಿಸುತ್ತಿದ್ದ ರೈಲಿನಲ್ಲಿ ಯುವಕನಿಗೆ ಅಮಾನವೀಯ ಶಿಕ್ಷೆ
ಸಹ ಪ್ರಯಾಣಿಕನೊಬ್ಬ ತಮ್ಮ ಅನುಮತಿ ಪಡೆಯದೇ ಬಾಟಲ್ ನಲ್ಲಿದ್ದ ನೀರು ಕುಡಿದಿದ್ದಕ್ಕೆ ಆಕ್ರೋಶಗೊಂಡ ಮೂವರು ಯುವಕರು ಆತನಿಗೆ ಚಲಿಸುತ್ತಿದ್ದ ರಾಲಿನ ಕಿಟಕಿಗೆ ...

ಇಟಾರ್ಸಿ: ಸಹ ಪ್ರಯಾಣಿಕನೊಬ್ಬ ತಮ್ಮ ಅನುಮತಿ ಪಡೆಯದೇ ಬಾಟಲ್ ನಲ್ಲಿದ್ದ ನೀರು ಕುಡಿದಿದ್ದಕ್ಕೆ ಆಕ್ರೋಶಗೊಂಡ ಮೂವರು ಯುವಕರು ಆತನಿಗೆ ಚಲಿಸುತ್ತಿದ್ದ ರಾಲಿನ ಕಿಟಕಿಗೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಾರ್ಚ್ 25 ರಂದು ಈ ಅಮಾನವೀಯ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳ ಬಾಟಲಿಯಲ್ಲಿನ ನೀರನ್ನು ಹಲ್ಲೆಗೊಳಗಾದ ಮುಂಬಯಿಯಲ್ಲಿ ಕೆಲಸ ಮಾಡುತ್ತಿರುವ ಸುಮಿತ್ ಎಂಬಾತ ಕುಡಿದಿದ್ದ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಯುವಕನನ್ನು ರೈಲಿನ ಕಿಟಕಿಗೆ ಕಟ್ಟಿ ಅಮಾನವೀಯವಾಗಿ ಹೊಡೆದಿದ್ದಾರೆ.
ಸುಮಾರು 4 ಗಂಟೆಗಳ ಕಾಲ ಸುಮಿತ್ ನನ್ನು ರೈಲಿನ ಕಿಟಕಿಗೆ ಕಟ್ಟಿ ಹಾಕಿದ್ದಾರೆ. ಮತ್ತೆ ರೈಲು ನಿಂತಾಗ ಪ್ಲಾಟ್ ಪಾರಂ ನಲ್ಲಿ ಮತ್ತೆ ಆತನಿಗೆ ಕರುಣೆಯಿಲ್ಲದೇ ತಮ್ಮ ಬೆಲ್ಟ್ ನಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ನಂತರ ಅಲ್ಲಿದ್ದ ಪ್ರಯಾಣಿಕರು ಸುಮಿತ್ ನನ್ನು ರಕ್ಷಿಸಿದ್ದಾರೆ.
ಹಲ್ಲೆ ಮಾಡಿದ ಯುವಕರು ಬಿಹಾರ ಮೂಲದವರಾಗಿದ್ದು, ಯಾವುದೋ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂಬಯಿಗೆ ರೈಲಿನಲ್ಲಿ ತೆರಳುತ್ತಿದ್ದರು. ರೈಲ್ವೆ ರಕ್ಷಣಾ ಪಡೆ ಎಫ್ ಐ ಆರ್ ದಾಖಲಿಸಿದ್ದು ತನಿಖೆ ಮುಂದುವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


