ದೇಶ

ಪಾಕ್ ತನಿಖಾ ತಂಡದಲ್ಲಿ ಹಫೀಜ್ ಸಯೀದ್ ಕೂಡ ಭಾಗವಾಗಿರಬಹುದು: ಶಿವಸೇನೆ

ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ತನಿಖಾ ತಂಡಕ್ಕೆ ಭಾರತದಲ್ಲಿ ತನಿಖೆ ನಡೆಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಕಿಡಿಕಾರಿದ್ದು, ಪಾಕ್ ತನಿಖಾ ತಂಡದಲ್ಲಿ...

ಪಾಕ್ ತನಿಖಾ ತಂಡದಲ್ಲಿ ಹಫೀಜ್ ಸಯೀದ್ ಕೂಡ ಭಾಗವಾಗಿರಬಹುದು: ಶಿವಸೇನೆ
ಶಿವಸೇನೆ ನಾಯಕ ಸಂಜಯ್ ರಾವತ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ತನಿಖಾ ತಂಡಕ್ಕೆ ಭಾರತದಲ್ಲಿ ತನಿಖೆ ನಡೆಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಕಿಡಿಕಾರಿದ್ದು, ಪಾಕ್ ತನಿಖಾ ತಂಡದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೂಡ ಭಾಗವಾಗಿರಬಹುದು. ಆದರೆ, ಇದನ್ನು ತಿಳಿಯುವವರು ಯಾರು ಇಲ್ಲ ಎಂದು ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ನಮ್ಮ ದೇಶದಲ್ಲಿ ಇಂದು ನಾಗರಿಕರಿಗೆ ಭದ್ರತೆಯಿಲ್ಲ. ಉಗ್ರರ ದಾಳಿಗೆ ನಾಗರೀಕರು ಬಲಿಯಾಗುತ್ತಿದ್ದಾರೆ. ಆದರೆ, ಪಾಕಿಸ್ತಾನದಿಂದ ಭಯೋತ್ಪಾದಕರೇ ಆಗಲಿ, ಕ್ರಿಕೆಟಿಗರಾಗಲಿ ಅಥವಾ ನಟ-ನಟಿಯರು ಬರಲಿ ಅವರಿಗೆ ನಮ್ಮ ದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲಾಗುತ್ತದೆ. ಪ್ರತೀ ನಿತ್ಯ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಪಠಾಣ್ ಕೋಟ್ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಬಂದು ತನಿಖೆ ನಡೆಸುತ್ತಿರುವುದು ನಿಜಕ್ಕೂ ದೇಶಕ್ಕೆ ದೊಡ್ಡ ಅಪಮಾನ ಎಂದು ಹೇಳಿದ್ದಾರೆ.

ತನಿಖಾ ತಂಡದಲ್ಲಿ ಆಂತರಿಕ ಭದ್ರತಾಧಿಕಾರಿಯಿದ್ದರೂ ಕೂಡ ತಂಡದೊಂದಿಗೆ ಉಗ್ರ ಹಫೀಜ್ ಸಯೀದ್ ಹಾಗೂ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕೂಡ ಭಾರತಕ್ಕೆ ಬಂದಿರಬಹುದು. ಆದರೆ, ಈ ಯಾರೂ ತಿಳಿದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇಂದು ಪಾಕಿಸ್ತಾನ ತನಿಖಾ ತಂಡವನ್ನು ಭಾರತಕ್ಕೆ ಬರಲು ಬಿಟ್ಟಿದ್ದೇವೆ. ಇದು ನಮ್ಮ ವಿಫಲತೆಯನ್ನು ತೋರಿಸುತ್ತದೆ. ಇದರಲ್ಲಿ ಪಾಕಿಸ್ತಾನವೇನು ಮಾಡಲು ಸಾಧ್ಯ? ತಪ್ಪಿತಸ್ಥ ಪಕ್ಷಗಳೇ ಇಂದು ತನಿಖೆ ನಡೆಸುತ್ತಿವೆ? ದೇಶ ನಮ್ಮ ಪರಿಸ್ಥಿತಿ ನೋಡಿ ನಗುತ್ತಿದೆ.

ಒಂದು ವೇಳೆ ಭಾರತದ ತನಿಖಾ ತಂಡ ಪಾಕಿಸ್ತಾನಕ್ಕೆ ಹೋಗಿ ಇದೇ ರೀತಿಯಾಗಿ ತನಿಖೆ ನಡೆಸಲು ಬಿಡಿ ಎಂದರೆ ಪಾಕಿಸ್ತಾನ ಅನುವು ಮಾಡಿಕೊಡುತ್ತದೆಯೇ? ಪಾಕಿಸ್ತಾನ ವಿಚಾರದಲ್ಲಿ ಭಾರತ ಎಂದಿಗೂ ಹಿಂದೆ ಇರುತ್ತದೆ. ಪಾಕ್ ತಂಡ ಭಾರತಕ್ಕೆ ಆಗಮಿಸಿರುವುದು ಭದ್ರತೆಗೆ ನೀಡಿರುವ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.