ಗುಜರಾತ್ ನ 10,000 ಅಂಗನವಾಡಿಯಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವಿಲ್ಲ
ಗುಜರಾತಿನಲ್ಲಿ ಒಟ್ಟು 53,000 ಅಂಗನವಾಡಿಗಳಿದ್ದು, ಸುಮಾರು 10,000 ಅಂಗನವಾಡಿಗಳಲ್ಲಿ ಶೌಚಾಲಯ ಮತ್ತು ಕುಡಿಯುವ...

Published On :
ಅಹಮದಾಬಾದ್: ಗುಜರಾತಿನಲ್ಲಿ ಒಟ್ಟು 53,000 ಅಂಗನವಾಡಿಗಳಿದ್ದು, ಸುಮಾರು 10,000 ಅಂಗನವಾಡಿಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ ಎಂದು ರಾಜ್ಯ ಸರ್ಕಾರದ ಅಂಕಿಅಂಶದಲ್ಲಿ ತಿಳಿದು ಬಂದಿದೆ.
4,500 ಅಂಗನವಾಡಿಗಳಲ್ಲಿ ಕುಡಿನ ನೀರಿನ ವ್ಯವಸ್ಥೆ ಮತ್ತು 5,600 ಅಂಗನವಾಡಿಗಳಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ತಿಳಿದು ಬಂದಿದೆ.
ಬುಡಕಟ್ಟು ಜಿಲ್ಲೆಗಳಾಗಿರುವ ಪಂಚಮಹಲ್, ಮಹಿಸಾಗರ್ ಮತ್ತು ದಾಹೋಡ್ ನಲ್ಲಿರುವ ಅಂಗನವಾಡಿಗಳಲ್ಲಿ ಶೌಚಾಲಯ, ಕುಡಿಯುವ ನೀರನ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳಿಲ್ಲ.
ದಾಹೋಡ್ ಜಿಲ್ಲೆಗಳಲ್ಲಿ 808 ಅಂಗನವಾಡಿಗಳಿದ್ದು, ಪಂಚಮಹಲ್ ಜಿಲ್ಲೆಯಲ್ಲಿ 1,411 ಅಂಗನವಾಡಿಗಳಿವೆ. ಮಹಿಸಾಗರ್ ನಲ್ಲಿ 939 ಅಂಗನವಾಡಿಗಳಿದ್ದು, ವಲಸಾಡ್ ನಲ್ಲಿ 586 ಅಂಗನವಾಡಿಗಳಿವೆ. ಈ ಎಲ್ಲಾ ಅಂಗನವಾಡಿಗಳು ಮೂಲ ಸೌಕರ್ಯ ಸೌಲಭ್ಯಗಳಿಂದ ವಂಚಿತವಾಗಿದೆ ವರದಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


