ದೇಶ

ಕಲ್ಲಿದ್ದಲು ಹಗರಣ: ನಾಳೆ ತೀರ್ಪು ಪ್ರಕಟಿಸಲಿರುವ ವಿಶೇಷ ಕೋರ್ಟ್

ಕಲ್ಲಿದ್ದಲು ಹಂಚಿಕೆ ಹಗರಣದ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಆ ಕಂಪನಿಯ...

ಕಲ್ಲಿದ್ದಲು ಹಗರಣ: ನಾಳೆ ತೀರ್ಪು ಪ್ರಕಟಿಸಲಿರುವ ವಿಶೇಷ ಕೋರ್ಟ್
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣದ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಆ ಕಂಪನಿಯ ಇಬ್ಬರು ನಿರ್ದೇಶಕರ ವಿಚಾರಣೆ ಅಂತ್ಯಗೊಳಿಸಿರುವ ನ್ಯಾಯಾಲಯ ನಾಳೆ ತೀರ್ಪು ಪ್ರಕಟಿಸಲಿದೆ.

ಈ ಮೂಲಕ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ನಾಳೆ ಮೊದಲ ಬಾರಿಗೆ ತೀರ್ಪು ಪ್ರಕಟವಾಗಲಿದೆ. ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು, ಮಾರ್ಚ್ 21ರಂದು ವಿಚಾರಣೆ ಅಂತ್ಯಗೊಳಿಸಿದ್ದು, 28 ತೀರ್ಪು ಕಾಯ್ದಿರಿಸಿದ್ದರು.

ಆರ್ ಸಿ ರಂಗ್ಟಾ ಗ್ರೂಪ್ ಗೆ ಸೇರಿದ ಜಾರ್ಖಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 2006ರ ಜನವರಿ 13ರಂದು ದಕ್ಷಿಣ ಧಾದು ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಲಾಗಿತ್ತು ಎಂದು ಸಿಬಿಐ ಹೇಳಿತ್ತು.

ಕಂಪನಿಯ ನಿರ್ದೇಶಕರಾದ ಆರ್ ಎಸ್ ರಂಗ್ಟಾ ಮತ್ತು ಆಸ್ ಸಿ ರಂಗ್ಟಾ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳು. ತಪ್ಪು ದಾಖಲೆಗಳನ್ನು ನೀಡುವ ಮೂಲಕ ಕಲ್ಲಿದ್ದಲು ಹಂಚಿಕೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಸಿಬಿಐ ವರದಿ ನೀಡಿತ್ತು.

ಆಸ್ ಎಸ್ ರಂಗ್ಟಾ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮ್ಮ ರಕ್ಷಣಾ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಕರೆಸಬೇಕು ಎಂಬುದಾಗಿ ಮನವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದರು. ತದ ನಂತರ ಜನವರಿ 14ರಂದು ನಿರ್ದೇಶಕರಾದ ರಂಗ್ಟಾ ಅವರಿಗೆ ತಲಾ ರು.1 ಲಕ್ಷ ಬಾಂಡ್, ಶ್ಯೂರಿಟಿ ಮೇಲೆ ಜಾಮೀನು ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.