ಅಫ್ಜಲ್ ಗುರು ದೇಶದ್ರೋಹಿ ಎಂದು ಮಾಧ್ಯಮಗಳಲ್ಲಿ ಪಿಡಿಪಿ ಹೇಳಿಕೆ ನೀಡಲಿ: ಕುಮಾರ್ ವಿಶ್ವಾಸ್
ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ- ಪಿಡಿಪಿಗೆ ಈಗ ಅಫ್ಜಲ್ ಗುರು ಬಗೆಗಿನ ನಿಲುವನ್ನು ಸ್ಪಷ್ಟಪಡಿಸುವ ಹೊಸ ಸವಾಲು ಎದುರಾಗಿದೆ.

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ- ಪಿಡಿಪಿಗೆ ಈಗ ಅಫ್ಜಲ್ ಗುರು ಬಗೆಗಿನ ನಿಲುವನ್ನು ಸ್ಪಷ್ಟಪಡಿಸುವ ಹೊಸ ಸವಾಲು ಎದುರಾಗಿದೆ.
ಉಗ್ರ ಅಫ್ಜಲ್ ಗುರು ಗಲ್ಲು ಶಿಕ್ಷೆ ವಿಷಯದಲ್ಲಿ ಪರಸ್ಪರ ಭಿನ್ನ ನಿಲುವು ಹೊಂದಿದ್ದ ಪಕ್ಷಗಳು ಮೈತ್ರಿಗೆ ಮುಂದಾಗಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿತ್ತು. ಈಗ ಆಮ್ ಆದ್ಮಿ ಪಕ್ಷವೂ ಪಿಡಿಪಿ-ಬಿಜೆಪಿ ಮೈತ್ರಿಯನ್ನು ಪ್ರಶ್ನಿಸಿದೆ. ಈ ಬಗ್ಗೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿಗೆ ಪತ್ರ ಬರೆದಿರುವ ಆಪ್ ನ ನಾಯಕ ಕುಮಾರ್ ವಿಶ್ವಾಸ್, ದೇಶವಿರೋಧಿ ಘೋಷಣೆ ಕೂಗಿದ್ದ ಕಾಶ್ಮೀರಿ ಯುವಕನ ಬಂಧನವನ್ನು ಸ್ವಾಗತಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
"ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗುತ್ತಿದೆ ಎಂದು ತಿಳಿದುಬಂದಿದೆ ಈ ಹಿಂದೆ ನೀವು ಅಫ್ಜಲ್ ಗುರು ಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿದ್ದಿರಿ. ಆದರೆ ಗಲ್ಲು ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದೀರ, ಅಫ್ಜಲ್ ಗುರು ವಿಷಯದಲ್ಲಿ ನಿಮ್ಮ ನಿಲುವು ಬದಲಾಗಿದೆಯೇ?" ಎಂದು ಕುಮಾರ್ ವಿಶ್ವಾಸ್ ಕೇಳಿದ್ದಾರೆ.
ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗುತ್ತಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿರುವ ಕುಮಾರ್ ವಿಶ್ವಾಸ್, ಈಗ ಅಫ್ಜಲ್ ಗುರು ಹುತಾತ್ಮ ಅಲ್ಲ ದೇಶದ್ರೋಹಿ ಎಂದು ಮಾಧ್ಯಮಗಳಲ್ಲಿ ಪಿಡಿಪಿ ನಾಯಕರು ಹೇಳಿಕೆ ನೀಡಬೇಕು ಎಂದು ಕುಮಾರ್ ವಿಶ್ವಾಸ್ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


