ಬುಂಧೇಲ್‌ಖಂಡ್ ದಲ್ಲಿ ಬರ; ಆದ್ರೂ ಉ.ಪ್ರದೇಶ ಸಚಿವರಿಂದ ವಿದೇಶ ಪ್ರವಾಸ
ಉತ್ತರ ಪ್ರದೇಶದ ಬುಂಧೇಲ್‌ಖಂಡ್ ನಿರಂತರ ನಾಲ್ಕನೇ ವರ್ಷ ಬರಗಾಲ ಎದುರಿಸುತ್ತಿದೆ.ಬೆಳೆ ನಷ್ಟದಂದ ರೈತರು ಕಂಗಾಲಾಗಿದ್ದಾರೆ...

Published On :
ಲಖನೌ: ಉತ್ತರ ಪ್ರದೇಶದ ಬುಂಧೇಲ್‌ಖಂಡ್ ನಿರಂತರ ನಾಲ್ಕನೇ ವರ್ಷ ಬರಗಾಲ ಎದುರಿಸುತ್ತಿದೆ.ಬೆಳೆ ನಷ್ಟದಂದ ರೈತರು ಕಂಗಾಲಾಗಿದ್ದಾರೆ. ಹಾಗಿದ್ದರೂ ರಾಜ್ಯದ 17 ಮಂದಿ ಸಚಿವರು ಮತ್ತು ಶಾಸಕರು "ಅಧ್ಯಯನ ಪ್ರವಾಸ'ದ ನೆಪದಲ್ಲಿ ವಿದೇಶ ಪ್ರವಾಸದಲ್ಲಿದ್ದಾರೆ. ಶಾಪಿಂಗ್ ಮತ್ತು ಸೈಟ್ ಸೀಯಿಂಗ್ ಈ ವಿದೇಶ ಪ್ರವಾಸದ ಮುಖ್ಯ ವಿಷಯವಾಗಿದ್ದು ಆಸ್ಟೇಲಿಯ, ನ್ಯೂಜೀಲ್ಯಾಂಡ್ ಮತ್ತು ಜಪಾನ್ ದೇಶಗಳಿಗೆ ಇವರು ಭೇಟಿ ನೀಡಲಿದ್ದಾರೆ.
ಒಟ್ಟು 18 ದಿನಗಳ ಈ ಸುದೀರ್ಘ "ಅಧ್ಯಯನ' ವಿದೇಶ ಪ್ರವಾಸದಲ್ಲಿ ಉತ್ತರ ಪ್ರದೇಶ ಶಾಸಕರು ಮತ್ತು ಸಚಿವರು ಜಪಾನ್ ಸಹಿತ ಮೂರು ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವಿದೇಶ ಪ್ರವಾಸದ ಎಲ್ಲ ಖರ್ಚು ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರವೇ ಭರಿಸುತ್ತಿದೆ.
ವಿದೇಶ ಪ್ರವಾಸಕ್ಕೆ ಹೋಗಿರುವವರಲ್ಲಿ 17 ಮಂದಿಯಲ್ಲಿ 15 ಮಂದಿ ಶಾಸಕರು ಆಳುವ ಪಕ್ಷದವರೇ ಆಗಿದ್ದಾರೆ. ಉಳಿದ ಇಬ್ಬರಲ್ಲಿ ಒಬ್ಬರು ಕಾಂಗ್ರೆಸ್ ಶಾಸಕ (ಪ್ರದೀಪ್ ಮಾಥುರ್) ಮತ್ತು ಇನ್ನೊಬ್ಬರು ಆರ್‌ಜೆಡಿ ಶಾಸಕ (ದಳವೀರ್ ಸಿಂಗ್). ಉತ್ತರ ಪ್ರದೇಶದ ವಿಧಾನಸಭಾ ಸ್ಪೀಕರ್ ಎಂ ಪಿ ಪಾಂಡೆ ಅವರು ವಿದೇಶ ಪ್ರವಾಸದ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ನಾಯಕರು: ಸಮಾಜವಾದಿ ಪಕ್ಷದ ಆಜಂ ಖಾನ್, ರಘುಬರ್ ಪ್ರತಾಪ್ ಸಿಂಗ್, ಓಂ ಪ್ರಕಾಶ್ ಸಿಂಗ್, ಆಶಾ ಕಿಶೋರ್, ಸಿಎಚ್ ಫಸೀಹಾ ಬಶೀರ್, ಅನೂಪ್ ಗುಪ್ತಾ, ಅರುಣಾ ಕುಮಾರಿ ಕೋರಿ, ಅಭಿಷೇಕ್ ಮಿಶ್ರಾ, ಇರ್ಫಾನಿ ಸೋಳಂಕಿ, ಯೋಗೇಶ್ ಪ್ರತಾಪ್ ಸಿಂಗ್, ಮೊಹಮ್ಮದ್ ರೆಹಾನ್ ನಯೀಮ್, ಭಾಗವತ್ ಶರಣ್ ಗಂಗ್ವಾರ್, ಸಂಗ್ರಾಂ ಸಿಂಗ್ ಯಾದವ್, ಅಂಭಿಕಾ ಚೌಧರಿ, ಪ್ರದೀಪ್ ಕುಮಾರ್ ದುಬೆ, ಸುಕೇಶ್ ಬಹಾದ್ದೂರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


