ದೇಶ

ಉತ್ತರಪ್ರದೇಶ: ಹೆಚ್ಚುವರಿ ಅಡ್ವೋಕೇಟ್ ಜನರಲ್ ಭಾಟಿಯಾ ವಜಾ

ಸರ್ಕಾರವನ್ನು ಸರಿಯಾಗಿ ಸಮರ್ಥಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅಡಿಷನಲ್ ಅಡ್ವೋಕೇಟ್ ಜನರಲ್ ಗೌರವ್ ಭಾಟಿಯಾ ಸೇರಿದಂತೆ ಇಬ್ಬರು ಉನ್ನತ ಕಾನೂನು...

ಉತ್ತರಪ್ರದೇಶ: ಹೆಚ್ಚುವರಿ ಅಡ್ವೋಕೇಟ್ ಜನರಲ್ ಭಾಟಿಯಾ ವಜಾ
ಗೌರವ್ ಭಾಟಿಯಾ
Published On :

ಲಖನೌ: ಸರ್ಕಾರವನ್ನು ಸರಿಯಾಗಿ ಸಮರ್ಥಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅಡಿಷನಲ್ ಅಡ್ವೋಕೇಟ್ ಜನರಲ್ ಗೌರವ್ ಭಾಟಿಯಾ ಸೇರಿದಂತೆ ಇಬ್ಬರು ಉನ್ನತ ಕಾನೂನು ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರವು ವಜಾ ಮಾಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ದಿವಂಗತ ವೀರೇಂದ್ರ ಭಾಟಿಯಾ ಅವರ ಪುತ್ರ ಗೌರವ್ ಭಾಟಿಯಾ ಮತ್ತು ರೀನಾ ಸಿಂಗ್ ಅವರನ್ನು ಹುದ್ದೆಗಳಿಂದ ಕಿತ್ತು ಹಾಕಲಾಗಿದೆ ಎಂದು ವಿಶೇಷ ಕಾರ್ಯದರ್ಶಿ(ಕಾನೂನು) ಅಮರ್ ಜೀತ್ ತ್ರಿಪಾಠಿ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರ ನನ್ನನ್ನು ವಜಾ ಮಾಡಿಲ್ಲ, ನಾನೇ ರಾಜಿನಾಮೆ ನೀಡಿರುವೆ
ಇನ್ನು ಗೌರವ್ ಭಾಟಿಯಾ ಅವರು ಮಾತ್ರ ತಾವು ಅಡಿಷನಲ್ ಅಡ್ವೋಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಫೇಸ್​ಬುಕ್ ಪೋಸ್ಟಿನಲ್ಲಿ ತಿಳಿಸಿದ್ದು ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದ್ದಾರೆ.

ಈ ಕುರಿತಂತೆ ಸಮಾಜವಾದಿ ಪಕ್ಷದ ಕಾಲೆಳೆದಿರುವ ಬಿಜೆಪಿ ರಾಜ್ಯ ವಕ್ತಾರ ವಿಜಯ್ ಬಹಾದುರ್ ಪಾಠಕ್ ಅವರು, ಬೆಳವಣಿಗೆಯನ್ನು ಜಿಜ್ಞಾಸೆಗೆ ಯೋಗ್ಯವಾದ ಬೆಳವಣಿಗೆ ಎಂದು ಬಣ್ಣಿಸಿದ್ದು,  ಇದು ವಜಾವೋ ಅಥವಾ ರಾಜೀನಾಮೆಯೋ ಎಂಬುದರ ಬಗ್ಗೆ ಗೊಂದಲ ಹುಟ್ಟಿರುವುದರ ಹೊರತಾಗಿ ಸಮಾಜವಾದಿ ಪಕ್ಷಕ್ಕೆ ಜನರ ಬಗ್ಗೆ ಎಂತಹ ಅನಾದರ ಇದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.