ಮತ್ತೆ ಕಾಶ್ಮೀರದಲ್ಲಿ ಪಾಕ್ ಧ್ವಜ ಹಾರಿಸಿದ ಅಂದ್ರಾಬಿ
ಕಳೆದ ವರ್ಷದಂತೆಯೇ ಈ ವರ್ಷವೂ ಪಾಕಿಸ್ತಾನ ರಾಷ್ಟ್ರೀಯ ದಿನದಂದು (ಬುಧವಾರ) ಕಾಶ್ಮೀರದ ಮುಸ್ಲಿಂ ಮಹಿಳಾ ಪ್ರತ್ಯೇಕತಾವಾದಿ ಸಂಘಟನೆ ದುಖ್ರರನ್-ಇ-ಮಿಲ್ಲತ್ (ಡಿಇಎಂ) ನಾಯಕಿ...

ಶ್ರೀನಗರ: ಕಳೆದ ವರ್ಷದಂತೆಯೇ ಈ ವರ್ಷವೂ ಪಾಕಿಸ್ತಾನ ರಾಷ್ಟ್ರೀಯ ದಿನದಂದು (ಬುಧವಾರ) ಕಾಶ್ಮೀರದ ಮುಸ್ಲಿಂ ಮಹಿಳಾ ಪ್ರತ್ಯೇಕತಾವಾದಿ ಸಂಘಟನೆ ದುಖ್ರರನ್-ಇ-ಮಿಲ್ಲತ್ (ಡಿಇಎಂ) ನಾಯಕಿ ಆಸಿಯಾ ಅಂದ್ರಾಬಿ ನೇತೃತ್ವದಲ್ಲಿ ಗುರುವಾರ ಶ್ರೀನಗರದ ಹಲವೆಡೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದಾದ್ಯಂತ ನಿನ್ನೆ ಪಾಕಿಸ್ತಾನ ದಿನವನ್ನು ಆಚರಿಸಲಾಗುತ್ತಿತ್ತು. ಪಾಕಿಸ್ತಾನದ ಸ್ವಾತಂತ್ರ್ಯ ದಿನ (ಆಗಸ್ಟ್ 14) ಮತ್ತು ಅಲ್ಲಿನ ರಾಷ್ಟ್ರೀಯ ದಿನದಂದು ಅಂದ್ರಾಬಿ ಮತ್ತು ಅವರ ಬೆಂಬಲಿಗರು ಪ್ರತಿ ವರ್ಷವೂ ಆ ದೇಶದ ಧ್ವಜವನ್ನು ಹಾರಿಸುತ್ತಾರೆ.
ಇದರಂತೆ ನಿನ್ನೆಯೂ ಬುರ್ಖಾ ಧರಿಸಿ ಬಂದಿರುವ ದುಖ್ರರನ್-ಇ-ಮಿಲ್ಲತ್ ನ ಕಾರ್ಯಕರ್ತೆಯರು ಶ್ರೀನಗರದ ಕೇಂದ್ರ ಸ್ಥಳಗಳಾದ ಲಾಲ್ ಚೌಕ ಮತ್ತು ಸಿವಿಲ್ ಲೈನ್ಸ್ ಸೇರಿ ಹಲವೆಡೆ ಪಾಕಿಸ್ತಾನ ಧ್ವಜ ಹಾರಿಸಿದ್ದಾರೆ. ಅಲ್ಲದೆ, ಧ್ವಜಾರೋಹಣ ವೇಳೆ ಪಾಕ್ ರಾಷ್ಟ್ರಗೀತೆಯನ್ನು ಹಾಡಿದ್ದಾರೆಂದು ತಿಳಿದುಬಂದಿದೆ.
ಸಯ್ಯದ್ ಅಲಿ ಗಿಲಾನಿ ನೇತೃತ್ವದ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಜತೆ ಗುರುತಿಸಿಕೊಂಡಿರುವ ಅಂದ್ರಾಬಿ ವಿರುದ್ಧ ಕಳೆದ ವರ್ಷ ಪೊಲೀಸರು ಪಾಕಿಸ್ತಾನ ಧ್ವಜ ಹಾರಿಸಿ, ಆ ದೇಶದ ರಾಷ್ಟ್ರಗೀತೆ ಹಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


