ಬ್ರುಸೆಲ್ಸ್ ಉಗ್ರ ದಾಳಿ: ನಾಪತ್ತೆಯಾದ ಭಾರತೀಯ ವ್ಯಕ್ತಿ ಕೊನೆ ಬಾರಿ ಕರೆ ಮಾಡಿದ್ದು ಮೆಟ್ರೋದಿಂದ
ಬೆಲ್ಜಿಯಂನ ಬ್ರುಸೆಲ್ಸ್ ನಗರದಲ್ಲಿನ ಉಗ್ರದಾಳಿಯ ವೇಳೆ ನಾಪತ್ತೆಯಾಗಿದ್ದ ಭಾರತೀಯನ ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ...

Published On :
ನವದೆಹಲಿ: ಬೆಲ್ಜಿಯಂನ ಬ್ರುಸೆಲ್ಸ್ ನಗರದಲ್ಲಿನ ಉಗ್ರದಾಳಿಯ ವೇಳೆ ನಾಪತ್ತೆಯಾಗಿದ್ದ ಭಾರತೀಯನ ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಬ್ರುಸೆಲ್ಸ್‌ನ ಒಂದು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ರಾಘವೇಂದ್ರನ್ ಗಣೇಶ್ ಕೊನೆಯ ಬಾರಿ ಫೋನ್ ಮಾಡಿದ್ದರು ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಇನ್‌ಫೋಸಿಸ್ ಉದ್ಯೋಗಿಯಾಗಿರುವ ಬೆಂಗಳೂರು ಮೂಲದ ರಾಘವೇಂದ್ರನ್, ಕಳೆದ ನಾಲ್ಕು ವರ್ಷದಿಂದ ಇವರು ಬ್ರುಸೆಲ್ಸ್ ನಲ್ಲಿದ್ದಾರೆ. ಇವರನ್ನು ಪತ್ತೆ ಮಾಡಲು ಭಾರತೀಯ ರಾಯಭಾರಿ ಕಚೇರಿ ಕಠಿಣ ಪ್ರಯತ್ನ ಮಾಡುತ್ತಿದೆ.
ಅದೇ ವೇಳೆ ಜೆಟ್ ಏರ್‌ವೇಸ್‌ನ ಸಿಬ್ಬಂದಿಗಳಾದ ನಿಧಿ ಚಫೇಕರ್ ಮತ್ತು ಅಮಿತ್ ಮೋಟ್ವಾನಿ ಈ ದಾಳಿಯಲ್ಲಿ ಗಾಯಗೊಂಡಿದ್ದು, ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ.
ನಾನು ಈಗಷ್ಟೇ ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರಿ ಮಂಜೀವ್ ಪುರಿ ಅವರಲ್ಲಿ ಮಾತನಾಡಿದ್ದು ಮುಂಬೈ ಮೂಲದ ನಿಧಿ ಮತ್ತು ಅಮಿತ್ ಆರೋಗ್ಯ ಸುಧಾರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಬೆಲ್ಜಿಯಂನ ರಾಜಧಾನಿಯ ವಿಮಾನ ನಿಲ್ದಾಣದಲ್ಲೂ ಮೆಟ್ರೋ ಸ್ಟೇಷನ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ 35 ಮಂದಿ ಸಾವಿಗೀಡಾಗಿದ್ದು, ನೂರಕ್ಕಂತಲೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
InfosysSushma Swarajಸುಷ್ಮಾ ಸ್ವರಾಜ್Indian Embassyಇನ್ ಫೋಸಿಸ್ಭಾರತೀಯ ರಾಯಭಾರಿ ಕಚೇರಿBrusselsಬ್ರುಸೆಲ್ಸ್Raghavendran Ganeshರಾಘವೇಂದ್ರನ್ ಗಣೇಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


