ದೇಶ

ಪೊಲೀಸರ ವಿರುದ್ಧ ವಾಟ್ಸ್ ಅಪ್ ನಲ್ಲಿ ಅವಹೇಳನಕಾರಿ ಸಂದೇಶ: ಪತ್ರಕರ್ತನ ಬಂಧನ

ಪೊಲೀಸರ ವಿರುದ್ದ ಅವಹೇಳನಕಾರಿ ಪದಬಳಕೆ ಮಾಡಿ ವಾಟ್ಸ್ ಅಪ್ ನಲ್ಲಿ ಸಂದೇಶ ಕಳುಹಿಸಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ..

ಪೊಲೀಸರ ವಿರುದ್ಧ ವಾಟ್ಸ್ ಅಪ್ ನಲ್ಲಿ ಅವಹೇಳನಕಾರಿ ಸಂದೇಶ: ಪತ್ರಕರ್ತನ ಬಂಧನ
ಪತ್ರಕರ್ತ ಪ್ರಭಾತ ಸಿಂಗ್
Published On :

ರಾಯ್ಪುರ: ಪೊಲೀಸರ ವಿರುದ್ದ ಅವಹೇಳನಕಾರಿ ಪದಬಳಕೆ ಮಾಡಿ ವಾಟ್ಸ್ ಅಪ್ ನಲ್ಲಿ ಸಂದೇಶ ಕಳುಹಿಸಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಭಾತ ಸಿಂಗ್ ಎಂಬ ಛತ್ತೀಸ್​ಗಢದ ಪತ್ರಕರ್ತ ವಾಟ್ಸ್​ಆಪ್​ನಲ್ಲಿ ಅವಹೇಳನಕಾರಿ ಸಂದೇಶ ಬಿತ್ತರಿಸಿರುರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಭಾತ ಸಿಂಗ್ ಅವರು ಪತ್ರಕರ್ತರ ರಕ್ಷಣಾ ಕಾನೂನು ವಿಚಾರವಾಗಿ ಪೊಲೀಸರನ್ನು ನಿಂದಿಸಿದ್ದರು. ಇದೀಗ ಪ್ರಭಾತ್ ಸಿಂಗ್​ರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪತ್ರಕರ್ತನಿಗೆ ಮಾರ್ಚ್ 31ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದೇ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಪತ್ರಕರ್ತರಾದ ಸೋಮರು ನಾಗ್ ಹಾಗೂ ಸಂತೋಷ್ ಯಾದವ್ ಅವರನ್ನು ನಕ್ಸಲರಿಗೆ ಸಹಾಯಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.