ದೇಶ

ಇಂದಿರಾ ಪ್ರಭಾವಶಾಲಿ ಪಿಎಂ: ಇಂದಿರಮ್ಮನ ಗುಣಗಾನ ಮಾಡಿದ ಸುರೇಶ್ ಪ್ರಭು

ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ದೇಶದ ಓರ್ವ ಶಕ್ತಿಶಾಲಿ ಪ್ರಧಾನಿಯಾಗಿದ್ದರು. ಅವರು ದೇಶ ಕಂಡಿರುವ ಅತ್ಯಂತ ಪ್ರಭಾವಿ ಪ್ರಧಾನಿಗಳಲ್ಲಿ ಒಬ್ಬರು ..

ಇಂದಿರಾ ಪ್ರಭಾವಶಾಲಿ ಪಿಎಂ: ಇಂದಿರಮ್ಮನ ಗುಣಗಾನ ಮಾಡಿದ ಸುರೇಶ್ ಪ್ರಭು
ಸುರೇಶ್ ಪ್ರಭು
Published On :

ನವದೆಹಲಿ: ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ದೇಶದ ಓರ್ವ ಶಕ್ತಿಶಾಲಿ ಪ್ರಧಾನಿಯಾಗಿದ್ದರು. ಅವರು ದೇಶ ಕಂಡಿರುವ ಅತ್ಯಂತ ಪ್ರಭಾವಿ ಪ್ರಧಾನಿಗಳಲ್ಲಿ ಒಬ್ಬರು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರ ಗುಣಗಾನ ಮಾಡಿದ್ದಾರೆ.

ರೈಲ್ವೆ ಕಾರ್ಯಕ್ರಮವೊಂದರಲ್ಲಿ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ಇಲ್ಲಿಯವರೆಗೆ ಮಹಿಳಾ ಅಧ್ಯಕ್ಷರನ್ನು ಹೊಂದಿಲ್ಲ. ಆದರೆ ಭಾರತದಲ್ಲಿ ಮಹಿಳಾ ರಾಷ್ಟ್ರಪತಿ, ಲೋಕಸಭಾ ಸ್ಪೀಕರ್‌ ಹಾಗೂ ಪ್ರಧಾನಮಂತ್ರಿ ಹೊಂದಿರುವ ದೇಶ ನಮ್ಮದು. ಇಂದಿರಾ ಗಾಂಧಿ ದೇಶದ ಪ್ರಬಲ ಹಾಗೂ ಶಕ್ತಿಶಾಲಿ ಪ್ರಧಾನಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಅನೇಕ ಮಹಿಳಾ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದಲ್ಲಿ ಮಹಿಳೆಯರ ಸಾಧನೆ ಹಾಗೂ ದಕ್ಷತೆಗೆ ನಾವು ಯಾವಾಗಲೂ ಮಾನ್ಯತೆ ನೀಡಬೇಕು ಎಂದು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.