ಮಲ್ಯರಿಂದ ಭಾರತೀಯ ಉದ್ಯಮಿಗಳಿಗೆ ಕೆಟ್ಟ ಹೆಸರು: ಅರುಣ್ ಜೇಟ್ಲಿ
ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತದಲ್ಲಿನ ಖಾಸಗಿ ವಲಯದ ಉದ್ಯಮಿಗಳಿಗೂ ಕೆಟ್ಟ ಹೆಸರನ್ನು ತಂದಿದ್ದಾರೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ...

ಮುಂಬೈ: ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತದಲ್ಲಿನ ಖಾಸಗಿ ವಲಯದ ಉದ್ಯಮಿಗಳಿಗೂ ಕೆಟ್ಟ ಹೆಸರನ್ನು ತಂದಿದ್ದಾರೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ಮುಂಬೈ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಚರ್ಚೆಯೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಮಲ್ಯ ಅವರು ತಾವಷ್ಟೇ ಕೆಟ್ಟ ಹೆಸರನ್ನು ಪಡೆದುಕೊಂಡಿಲ್ಲ, ಭಾರತದಲ್ಲಿನ ಖಾಸಗಿ ವಲಯದ ಉದ್ಯಮಿಗಳಿಗೂ ಕೆಟ್ಟ ಹೆಸರನ್ನು ತಂದಿದ್ದಾರೆಂದು ಹೇಳಿದ್ದಾರೆ.
ಸಾಲ ತೀರಿಸುವುದನ್ನು ತಿರಸ್ಕರಿಸುತ್ತಿರುವ ಮಲ್ಯ ಅವರಿಂದ ಇಂದು ಬ್ಯಾಂಕುಗಳ ಮೇಲೆ ಪರಿಣಾಮ ಬೀರುತ್ತಿದೆ. ಬ್ಯಾಂಕುಗಳಿಂದ ಸಾಲ ತೆಗೆದುಕೊಂಡಿರುವ ಮತ್ತಷ್ಟು ಉದ್ಯಮಗಳು ಸಾಲ ಮರುಪಾವತಿ ಮಾಡುವುದನ್ನು ತಡ ಮಾಡುತ್ತಿದ್ದಾರೆ. ಮಲ್ಯ ಅವರು ಈ ರೀತಿಯಾಗಿ ಎಷ್ಟು ದಿನಗಳ ಕಾಲ ಜೀವನ ನಡೆಸಲು ಸಾಧ್ಯ.
ಮಲ್ಯ ಅವರ ಪ್ರಕರಣ ಸಾಮಾನ್ಯ ಪ್ರಕರಣಗಳಂತಲ್ಲ. ಈ ಪ್ರಕರಗಳು ಇಂದು ಉದ್ಯಮಗಳ ವಾತಾವರಣವನ್ನು ಹಾಳು ಮಾಡಿದೆ. ವ್ಯವಹಾರ ವೈಫಲ್ಯದಿಂದಾಗಿ ಇಂದು ಉದ್ಯಮ ವಲಯಗಳು, ವಿಮಾನಯಾನ ವಲಯಗಳು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಮಲ್ಯ ಜೊತೆಗೆ ಸ್ಪರ್ಧೆಗಿಳಿದಿದ್ದವರು ಹಾಗೂ ಅವರನ್ನು ಅನುಸರಿಸುತ್ತಿರುವವರು ಇಂದು ಸಂಕಷ್ಟದಲ್ಲಿದ್ದಾರೆ. ಮಲ್ಯ ಅವರು ಶೀಘ್ರದಲ್ಲಿ ಭಾರತಕ್ಕೆ ಬಂದು ಸಾಲವನ್ನು ಮರುಪಾವತಿ ಮಾಡಬೇಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


