ತರುಣ್ ಗೊಗೋಯ್ ಮತ್ತು ಅವರ ಪತ್ನಿ ಹೆಸರಲ್ಲಿರುವ ಚರಾಸ್ತಿ ರು.99,83,739!
ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಮತ್ತು ಅವರ ಪತ್ನಿ ಹೊಂದಿರುವ ಚರಾಸ್ತಿ ರು. 99,83,739! ಅದೇ ವೇಳೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ...

Published On :
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಮತ್ತು ಅವರ ಪತ್ನಿ ಹೊಂದಿರುವ ಚರಾಸ್ತಿ ರು. 99,83,739! ಅದೇ ವೇಳೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಸರ್ಬಾನಂದ ಸೊನೋವಾಲ್ ಅವರ ಚರಾಸ್ತಿ ಮೌಲ್ಯ ರು.70,44,919 ಆಗಿದೆ.
ನಾಲ್ಕನೇ ಬಾರಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿ ತಿಟಬೊರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಗೊಗೋಯ್ ಅವರಲ್ಲಿ ರು. 49,95,022 ಚರಾಸ್ತಿ ಇದೆ. ಏತನ್ಮಧ್ಯೆ ಅವರ ಪತ್ನಿ ಡಾಲಿ ಗೊಗೋಯ್ ಅವರಲ್ಲಿ ರು. 49,88,717 ಇದೆ ನಾಮಪತ್ರ ಸಲ್ಲಿಸುವ ವೇಳೆ ನೀಡಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಗೊಗೋಯ್ ಮತ್ತು ಅವರ ಪತ್ನಿ ಗುವಾಹಟಿ ಮತ್ತು ನವದೆಹಲಿಯಲ್ಲಿ ಭೂಮಿ ಹೊಂದಿದ್ದ್ದು, ರು. 4,25,00,000 ಸ್ಥಿರಾಸ್ತಿ ಇದೆ. ಅದೇ ವೇಳೆ ಬಿಜೆಪಿ ಅಭ್ಯರ್ಥಿಗೆ ರು. 1,15,00,000 ಮೌಲ್ಯದ ಸ್ಥಿರಾಸ್ತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


